
ಗ್ರಾಮದ ಮತದಾರರು ಬೇಕು 60 ಮನೆಗಳಿಗಿಲ್ಲ ಮೂಲಭೂತ ಸೌಕರ್ಯ.
ಕೊರಟಗೆರೆ ತಾಲ್ಲೂಕಿನ ಕೋಳಲ ಹೋಬಳಿಯ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಸೊಪ್ಪನಹಳ್ಳಿ ಗ್ರಾಮವು ಹೆಸರಿಗಷ್ಟೇ. ಗ್ರಾಮಕ್ಕಿಲ್ಲ ಮೂಲಭೂತ ಸೌಕರ್ಯ.
ತಾಲ್ಲೂಕಿನಲ್ಲಿ ಗ್ರಾಮೀಣ ರಸ್ತೆಗಳು ಇಂದಿಗೂ ಸಮಸ್ಯೆಯಾಗಿಯೇ ಉಳಿದಿವೆ. ಸರಕಾರದಿಂದ ಪ್ರತಿ ವರ್ಷ ಹಣ ಮಂಜೂರಾಗುತ್ತಲೇ ಇದ್ದರೂ ಹಳ್ಳಿ ರಸ್ತೆಯ ಸಮಸ್ಯೆಗೆ ಪರಿಹಾರ ಇಲ್ಲದಾಗಿದೆ. ಇದೀಗ ಮಳೆಯಿಂದ ಇನ್ನಷ್ಟು ರಸ್ತೆಗಳು ಹೊಂಡ, ಗುಂಡಿಗಳಿಂದ ತುಂಬಿವೆ.
ರಸ್ತೆಗೆ ಮಣ್ಣು ಹೊರತುಪಡಿಸಿ ಬೇರೆ ಯಾವ ಭಾಗ್ಯವೂ ಸಿಕ್ಕಿಲ್ಲ. ಗ್ರಾಮದಲ್ಲಿ ಮನೆಗಳ ಸಂಖ್ಯೆ ಏರಿಕೆ ಕಂಡಿವೆಯೇ ವಿನಃ ಅದಕ್ಕೆ ಹೊಂದಿಕೊಂಡು ರಸ್ತೆ ನಿರ್ಮಾಣ ಆಗಿಲ್ಲ. ಈ ಭಾಗದಿಂದ ನಿತ್ಯ ನೂರಾರೂ ವಿದ್ಯಾರ್ಥಿಗಳು ಶಾಲೆ ಕಾಲೇಜುಗಳಿಗೆ ನಡೆದುಕೊಂಡೇ ತೆರಳಬೇಕಾಗಿದೆ. ವಯೋ ವೃದ್ಧರು ಆಸ್ಪತ್ರೆಗೆ ತರಲು ಹತ್ತಿರದ ರಸ್ತೆ ಇದ್ದರೂ ಸುತ್ತು ಬಳಸಿಕೊಂಡು ನಗರಕ್ಕೆ ಹೋಗಬೇಕು, ಆಟೋ ಕಾರುಗಳನ್ನು ಆಸ್ಪತ್ರೆಗೆ ಹೋಗಲು ಕರೆದರೆ ನಿಮ್ಮ ಊರಿಗೆ ರಸ್ತೆ ಮಾರ್ಗವಿಲ್ಲ ನಾವು ಬರುವುದಿಲ್ಲ ಎಂಬ ಅಸೂಯೆ ಮಾತುಗಳನ್ನು ಹೇಳುತ್ತಾರೆ. ಗ್ರಾಮದ ಸುತ್ತ ಮುತ್ತಲ್ಲೂ ಕೃಷಿ ಅವಲಂಭಿತ ಪ್ರದೇಶ ಇದ್ದರು ರಸ್ತೆ ಮಾರ್ಗವು ಇಲ್ಲ.
ಈ ಭಾಗದ ರಾಜಕೀಯ ಮುಖಂಡರ ಕರೆಗೆ ಓಗೊಟ್ಟು ರಸ್ತೆ ನಿರ್ಮಿಸಲಾಗಿದ್ದರೂ ಅದರ ಗುಣಮಟ್ಟದ ಬಗ್ಗೆ ಯಾರೂ ತಲೆ ಕೆಡಿಸಿಕೊಂಡ ಹಾಗೆ ಕಾಣಿಸುತ್ತಿಲ್ಲ. ಬಿದ್ದ ಮಳೆಯಲ್ಲಿಯೇ ಕೆಲವು ರಸ್ತೆಗಳು ಬಣ್ಣ ಬದಲಿಸಿಕೊಂಡು ಮಂಕಾಗಿ ಹೋಗಿವೆ. ಕೆಲವು ಕಡೆ ಜಲ್ಲಿಕಲ್ಲುಗಳು ಎದ್ದು ಮೇಲೆ ಬಂದಿದ್ದು, ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಇದೆ.
ಗ್ರಾಮಸ್ಥರ ಅಸಮಾಧಾನ.

ಈ ಗ್ರಾಮದಲ್ಲಿ 60 ಮನೆಗಳಿದ್ದು 500 ಮತದಾರರು ಇದ್ದಾರೆ. ಮುಖ್ಯ ರಸ್ತೆಯಿಂದ 500 ಮೀಟರ್ ರಸ್ತೆಯನ್ನು ನಿರ್ಮಿಸಲು ಸಾಧ್ಯವಾಗಿಲ್ಲ 20 ವರ್ಷಗಳಿಂದ. ಗ್ರಾಮದ ರಸ್ತೆಯ ಪಕ್ಕದಲ್ಲಿರುವ ಶಾಲೆಯ ಮಕ್ಕಳು ಮಳೆ ಬಂದಾಗ ಮಣ್ಣು ರಸ್ತೆಯಲ್ಲಿ ಬಿದ್ದು ಬಟ್ಟೆ ಹಾಳು ಮಾಡಿಕೊಂಡು ಮನೆಯಲ್ಲಿ ವಹಿಸಿಕೊಳ್ಳುವ ಪರಿಸ್ಥಿತಿ. ಮಳೆಯ ನೀರು ರಸ್ತೆಯಲ್ಲೇ ಹರಿಯುತ್ತದೆ ಚರಂಡಿಯು ಇಲ್ಲ. ಇನ್ನು ನಮ್ಮ ಗ್ರಾಮ 200 ವರ್ಷಗಳ ಇತಿಹಾಸವನ್ನು ಹೊಂದಿದೆ ಎಲೆಕ್ಷನ್ ಮತ್ತು ಮತಗಳ ಏಣಿಕೆಗೆ ಮಾತ್ರ. ಕೊರಟಗೆರೆಗೆ ಹತ್ತಿರದ ರಸ್ತೆ ಮಾರ್ಗವಾಗಿರುವ ಉಳಿಸಪ್ಪನಹಳ್ಳಿಯಿಂದ ಗೊರವನಹಳ್ಳಿ ಮುಖ್ಯ ರಸ್ತೆಯ ಮೂಲಕ ಕೊರಟಗೆರೆಗೆ ಸಂಪರ್ಕಿಸುವ ರಸ್ತೆಯನ್ನು ಅಭಿವೃದ್ಧಿ ಮಾಡಿಕೊಡಬೇಕಾಗಿ ನಮ್ಮ ಶಾಸಕರಲ್ಲಿ ಕೇಳಿಕೊಳ್ಳುತ್ತೇನೆ ನಮ್ಮ ಶಾಸಕರು ಅಭಿವೃದ್ಧಿಯಲ್ಲಿ ಮುಂದೆ ಇದ್ದರು ಅಧಿಕಾರಿಗಳ ನಿರ್ಲಕ್ಷಕ್ಕೆ ನಮ್ಮ ಗ್ರಾಮ ಬಲಿಯಾಗಿದೆ ಎಂದ ಗ್ರಾಮಸ್ಥ ಪಾಂಡುರಂಗ:(ಪಾಂಡು) ಅಸಮಾಧಾನ ವ್ಯಕ್ತಪಡಿಸಿದರು.
ವರದಿ ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















