ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಿರಾ ನಗರದಲ್ಲಿ ಹಾವನೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಆದ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಅವರು ಸ್ವಾತಂತ್ರ್ಯ ದಿನಾಚರಣೆ ಭಾರತ ದೇಶಕ್ಕೆ ಸುಲಭವಾಗಿ ಸಿಕ್ಕಿದ್ದಲ್ಲ ಸಾವಿರಾರು ಜನರ ಹೋರಾಟದ ಫಲವಾಗಿ ದೊರೆಯಿತು ಬ್ರಿಟಿಷರು ಭಾರತಕ್ಕೆ ಬಂದ ಸಂದರ್ಭದಲ್ಲಿ ಭಾರತೀಯರು ಅನೇಕ ಕಷ್ಟ ನೋವುಗಳನ್ನ ಅನುಭವಿಸಿದರು. ವ್ಯಾಪಾರಕ್ಕೆ ಬಂದಂತವರು ಇಡೀ ದೇಶವನ್ನು ಆಕ್ರಮಿಸಿ ಆಳ್ವಿಕೆಯನ್ನು ಮಾಡಿದರು ಭಾರತೀಯರಿಗೆ ವಿವಿಧ ರೀತಿಯಲ್ಲಿ ವಿವಿಧ ರೀತಿಯ ತೆರಿಗೆಗಳನ್ನು ಹಾಕುವುದರ ಮೂಲಕ ಭಾರತೀಯರನ್ನ ಶೋಷಣೆ ಮಾಡಿದರು ಹಾಗೂ ಭಾರತೀಯರನ್ನ ಶೋಷಣೆ ಮಾಡುತ್ತಾ ದೇಶವನ್ನು ಶೋಷಣೆ ಮಾಡುತ್ತಾ ಸಾಗಿದರು ಹೀಗೆ ಭಾರತವು ಭಾರತ ಶೋಷಣೆಯಾಗಿ ದೇಶ ಸಹ ಬಡತನ ಸ್ಥಿತಿಗೆ ತಲುಪಿತ್ತು ಆದರೂ ಸಹ ಭಾರತೀಯರು ಜಗ್ಗದೆ ಹೋರಾಟ ಮಾಡುವುದರ ಮೂಲಕ ಸ್ವತಂತ್ರ ಹೋರಾಟಗಾರರು ಕ್ರಾಂತಿಕಾರಿಗಳು ಮಂದಗಾಮಿಗಳು. ತೀವ್ರ ಗಾಮಿಗಳು ಇವರ ಹೋರಾಟದ ಪಲವಾಗಿ ಗಾಂಧೀಜಿ ನೆಹರು ಸುಭಾಷ್ ಚಂದ್ರ ಬೋಸ್ ಭಗತ್ ಸಿಂಗ್ ರಾಜಗುರು ಸುಖದೇವ್ ಸಂಗೋಳ್ಳಿ ರಾಯಣ್ಣರ ಹೋರಾಟದ ಫಲವಾಗಿ ಇವತ್ತು ಭಾರತಕ್ಕೆ ಸ್ವಾತಂತ್ರ್ಯ ಬಂತು ಇವರ ತ್ಯಾಗ ಬಲಿದಾನ ನೆನಪಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಾವನೂರು ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲರು ಶಿವಕುಮಾರ್ ಕನ್ನಡ ಉಪನ್ಯಾಸಕರು ಹಾಗೂ ಸಮಾಜಶಾಸ್ತ್ರ ಉಪನ್ಯಾಸಕರು ಬಸವರಾಜ್ ಮತ್ತು ಇತಿಹಾಸ ಉಪನ್ಯಾಸಕರು ಕೊಟ್ಟ ಕರಿಯಣ್ಣ ಹಾಗೂ ಕಾಲೇಜಿನ ಕಿರಿಯ ಸಹಾಯಕರು ಆದ ತೊಫಿಕ್ ಹಾಗೂ ಕಾಲೇಜಿನ ಸಿಬ್ಬಂದಿ ಲಕ್ಷ್ಮಣ್ ,ಹಾವನೂರು ಪದವಿಪೂರ್ವ ಕಾಲೇಜಿನ ಹಿರಿಯ ಮಾಜಿ ಪ್ರಾಂಶುಪಾಲರು ಚಂದ್ರಶೇಖರ ರೆಡ್ಡಿ ಅವರು ಭಾಗವಹಿಸಿದ್ದರು.
ವರದಿಗಾರರು ಕೊಟ್ಟ ಕರಿಯಣ್ಣ




















