ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಒಮ್ಮೆ ನೋಡಾ ಕಪ್ಪತ್ತು ಗುಡ್ಡ

ಇಂದು ಮುಂಜಾನೆ ಕಪ್ಪತ್ತು ಗುಡ್ಡದ ಪ್ರಕೃತಿ ಸೌಂದರ್ಯವು ತುಂತುರು ಹನಿ ಮಳೆಯಲ್ಲಿ ಮತ್ತು ಇಬ್ಬನಿಯಲ್ಲಿ ಕಪ್ಪತ್ತು ಗುಡ್ಡವು ಹಸಿರಿನಿಂದ ಕೂಡಿರಲು ನೋಡುಗರ ಕಣ್ಮನ ಸೆಳೆಯುತ್ತಿತ್ತು.

ಈ ಕಪ್ಪತ್ತು ಗುಡ್ಡಕ್ಕೆ ರವಿವಾರ ಬೆಳಿಗ್ಗೆ ಕೊಪ್ಪಳದ ಅಡವಿ ಆಂಜಿನೇಯ ಬಡಾವಣೆಯ ವಾಕಿಂಗ್ ಗೆಳೆಯರ ಬಳಗದಿಂದ ಪ್ರಾಕೃತಿಕ ಸೌಂದರ್ಯ ಸವಿಯುವ ಉದ್ದೇಶದಿಂದ ಚಾರಣವನ್ನು ಹಮ್ಮಿಕೊಳ್ಳಲಾಗಿತ್ತು.

ಇದರ ನಾಯಕತ್ವವನ್ನು ವಿದ್ಯಾಧರ ಅವರು ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಈ ಚಾರಣದಲ್ಲಿ ಡಾ. ಗೋಣೆಪ್ಪ ವಾಣಿ, ಬಸವರಾಜ್ ಹಳ್ಳಿಕೆರಿ, ಮಂಜುನಾಥ್ ತಿಮ್ಮಲಾಪುರ್, ಯಮುನ ನಾಯಕ,
ಸಿದ್ದು ಭಾಷಿಂಗನವರು, ನರಸಿಂಹ, ವಿದ್ಯಾಧರ, ಚೇತನ ಕುಮಾರ, ಶಿವಾನಂದ, ಸದಾಶಿವ, ಅಮರೇಶ್ ನಾಯಕ, ಮಹೇಶ್, ಅವಿನಾಶ, ಯೋಗಾನಂದ ಹಾಗೂ ಇತರರು ಈ ಚಾರಣದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಪ್ರಸಿದ್ಧವಾಗಿರುವ ಕಪ್ಪತಗುಡ್ಡವು ಗದಗ ಜಿಲ್ಲೆಯ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕುಗಳ ವ್ಯಾಪ್ತಿಯಲ್ಲಿ ಹಬ್ಬಿರುವ ಜೀವವೈವಿಧ್ಯ ತಾಣವಾಗಿದೆ. ಇದು ಅಪರೂಪದ ಔಷಧೀಯ ಸಸ್ಯಗಳು, ವನ್ಯಜೀವಿಗಳು ಮತ್ತು ಐತಿಹಾಸಿಕ ಹಿನ್ನೆಲೆಗೆ ಹೆಸರುವಾಸಿಯಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 750 ಮೀಟರ್ ಎತ್ತರದಲ್ಲಿದೆ. ಇದು ಸುಮಾರು 80,000 ಎಕರೆಗೂ ಅಧಿಕ ವಿಶಾಲ ಪ್ರದೇಶದಲ್ಲಿ ಹಬ್ಬಿದೆ.

ಮಳೆಗಾಲದಲ್ಲಿ ಹಸಿರಿನಿಂದ ಕೂಡಿರುವ ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ಔಷಧೀಯ ಮತ್ತು ನೈಸರ್ಗಿಕ ಸಂಪತ್ತು ನೂರಾರು ವಿಧದ ಅಪರೂಪದ ಔಷಧೀಯ ಗಿಡಮೂಲಿಕೆಗಳು ಇಲ್ಲಿ ಸಿಗುತ್ತವೆ. ವಿವಿಧ ಪಕ್ಷಿಗಳು, ಪ್ರಾಣಿಗಳು ಹಾಗೂ ಸುಂದರ ಪರಿಸರ ಇಲ್ಲಿದೆ.

ಇಲ್ಲಿ ಪ್ರಾಚೀನ ಕಪ್ಪತ್ತು ಮಲ್ಲೇಶ್ವರ ದೇವಸ್ಥಾನ ಹಾಗೂ ಇತರೆ ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳಿವೆ. ಇದರ ಜೊತೆಗೆ ಆಶ್ರಮಗಳು ಮತ್ತು ಮಠಗಳು ಇವೆ.

ಈ ಕಪ್ಪತ್ತು ಗುಡ್ಡವು ಸ್ಥಳೀಯವಾಗಿ ಹಲವು ಐತಿಹಾಸಿಕ ಮತ್ತು ಪೌರಾಣಿಕ ಹಿನ್ನೆಲೆಗಳನ್ನು ಹೊಂದಿದೆ. ಪ್ರವಾಸಿಗರ, ಪ್ರಕೃತಿ ಪ್ರೇಮಿಗಳಿಗೆ ಬಹಳ ನೆಚ್ಚಿನ ತಾಣವಾಗಿದೆ. ಇಂತಹ ತಾಣಕ್ಕೆ ನೀವು ಒಮ್ಮೆ ಹೋಗಿ ಬನ್ನಿ.

  • ಡಾ. ನರಸಿಂಹ ಗುಂಜಹಳ್ಳಿ
    ಗಂಗಾವತಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!