ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮವಸ್ತ್ರದ ಸದುಪಯೋಗದೊಂದಿಗೆ ಮಕ್ಕಳು ಶಿಕ್ಷಣವಂತರಾಗಿ : ಜೋಗತಿ ರಾಜಮ್ಮ

ಸರ್ಕಾರಿ ಶಾಲಾ ಮಕ್ಕಳಿಗೆ ಜೋಗತಿ ರಾಜಮ್ಮರವರಿಂದ ಉಚಿತ ಸಮವಸ್ತ್ರ ವಿತರಣೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ಮೆಟ್ರಿ ಗ್ರಾ. ಪಂ. ಯ ಜಿನ್ನಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೋಗತಿ ರಾಜಮ್ಮ ಸುಗ್ಗನಹಳ್ಳಿ ಇವರು ಸ್ವಂತ ಖರ್ಚಿನಿಂದಾಗಿ ಶಾಲಾ ಮಕ್ಕಳಿಗೆ ಸಮವಸ್ತ್ರಗಳನ್ನು ಗುರುವಾರ ವಿತರಿಸಿದರು.
ನಂತರ ಮುಖ್ಯಗುರು ಇ.ಜಡೆಪ್ಪ ಮಾತನಾಡಿ, ಶಾಲೆಯಲ್ಲಿ ಪ್ರಸ್ತುತವಾಗಿ 27 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಲ್ಲಿನ ಬಡು ಬಡತನದಲ್ಲಿ ಜೀವನ ನಡೆಸುವ ಸರ್ಕಾರಿ ಶಾಲೆಯ ಮಕ್ಕಳಿಗೆ ಜೋಗತಿ ರಾಜಮ್ಮ ಇವರು ಉಚಿತವಾಗಿ ಸಮವಸ್ತ್ರಗಳನ್ನು ವಿತರಿಸಿದ್ದು, ಈ ಸಮವಸ್ತ್ರ ಸದುಪಯೋಗದೊಂದಿಗೆ ಮಕ್ಕಳಿಗೆ ಶಿಕ್ಷಣವಂತರಾಗಬೇಕು ಎಂದರು.
ನಂತರ ಜೋಗತಿ ರಾಜಮ್ಮ ಮಾತನಾಡಿ, ಪ್ರತಿ ವರ್ಷ ನಾನು ದುಡಿದಿರುವ ಹಣದಿಂದ ಸ್ವಲ್ಪನಾದರೂ ಶಾಲೆ ಮಕ್ಕಳಿಗೆ ದಾನ ಧರ್ಮ ಮಾಡುತ್ತೇನೆ. ಈ ಮಕ್ಕಳೇ ನನ್ನ ಮಕ್ಕಳೆಂದು ಭಾವಿಸಿದ್ದೇನೆ ಎಂದು ಹೇಳಿದರು,
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಂ.ರಮೇಶ್‌ ಬಾಬು, ಮುಖಂಡರಾದ ಕೆ.ಗಣೇಶ, ಮಲ್ಲಿಕಾರ್ಜುನ, ಕೊಂಡಪ್ಪ, ಪಿ.ತಾರಾಸಾಬ್, ಜಯರಾಮುಲು, ಪಿ.ರಾಜು, ಹೊನ್ನೂರ, ಅತಿಥಿ ಶಿಕ್ಷಕರಾದ ಉಮೇಶ ಮತ್ತು ಅಡುಗೆ ಸಿಬ್ಬಂದಿಗಳಾದ ರತ್ನಮ್ಮ, ಬುಡ್ಡಮ್ಮ ಸೇರಿದಂತೆ ಮಕ್ಕಳು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!