ಬಳ್ಳಾರಿ / ಕಂಪ್ಲಿ : ಇಲ್ಲಿನ ಸಂಗಾತ್ರಯ ಸಂಸ್ಕೃತ ಪಾಠ ಶಾಲೆಯಲ್ಲಿ ಆ. 13ರಿಂದ ಸೆ. 12 ರವರೆಗೆ ಹಾನಗಲ್ ಕುಮಾರೇಶ್ವರ ಪುರಾಣ ಪ್ರತಿದಿನ ಸಂಜೆ 6-30 ರಿಂದ ಕಾರ್ಯಕ್ರಮ ನಡೆಯಲಿದೆ.
ಗುರುವಾರರಂದು ಷಟ್ಸ್ಥಲ ಧ್ವಜಾರೋಹಣ
ಶ್ರೀ ಷ.ಬ್ರ. 108 ಕರಿಸಿದ್ದೇಶ್ವರ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು,
ಕರಿಸಿದ್ದೇಶ್ವರ ಸಂಸ್ಥಾನಮಠ, ಬುಕ್ಕಸಾಗರ ಶ್ರೀ
ದಿವ್ಯ ಸಾನಿಧ್ಯದಿಂದ ನೆರವೇರಿತು.
ಸಾಂಗತ್ರಯ ಸಂಸ್ಕೃತ ಪಾಠಶಾಲೆಯ ಕಾರ್ಯಕಾರಿ ಮಂಡಳಿಯ ಸರ್ವರು ಹಾಗೂ ವೀರಶೈವ ಸಮಾಜದ ಸದ್ಭಕ್ತರು ಭಾಗವಹಿಸಿದ್ದರು.
ಪುರಾಣ ಪ್ರಸ್ತುತಿ :
ಪೂಜ್ಯಶ್ರೀ ಪದ್ಮಾಕ್ಷರಯ್ಯ ತಾತನವರು, ಬೃಹನ್ಮಠ, ಸುಳೇಕಲ್ (ಚಕ್ರಶಿಲೆ)
ವಿಶ್ವನಾಥ ಶಾಸ್ತ್ರಿ ಅವರು ಪುರಾಣ ಪ್ರವಚನ ನೀಡಲಿದ್ದಾರೆ.
ರೇಣುಕಾರಾಜ ಗವಾಯಿ ಪುರಾಣ ಪಠಣ ಮತ್ತು ಸಂಗೀತ ಸೇವೆ, ಜಿ. ಸುಧಾಕರ್ ತಬಲಾಸಾಥ್ ನೀಡಲಿದ್ದಾರೆ.
ಎಂದು ಪ್ರಕಟಣೆ ತಿಳಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್




















