ಕೊಟ್ಟೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಹದ್ದಿನಾಳ ಗ್ರಾಮದ ದಲಿತ ಮುಖಂಡ ಭೂಮನಂದ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಲು ಕರ್ನಾಟಕ ಬೀಮ್ ಸೇನೆ (ರಿ.) ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ತಹಶೀಲ್ದಾರ ಕಛೇರಿಯಲ್ಲಿ ತಹಶೀಲ್ದಾರರಾದ ಅಮರೇಶ್ ಜಿ ಕೆ ರವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಬೀಮ್ ಸೇನೆ ವಿಜಯನಗರ ಜಿಲ್ಲಾ ಅಧ್ಯಕ್ಷರಾದ ಜಾಗಟಗೇರಿ ಸಿದ್ದೇಶ್ ರವರು ಮಾತನಾಡಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ಹದ್ದಿನಾಳ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಜಿಲ್ಲಾಧ್ಯಕ್ಷರಾದ ದಲಿತ ಮುಖಂಡ ಭೂಮಾನಂದ ಅವರ ಮೇಲೆ ದಿನಾಂಕ 04- 08 – 2026 ರಂದು ಸಂಜೆ ಸುಮಾರು 6.30 ಗಂಟೆಯ ಸಮಯದಲ್ಲಿ ಮಾರಕ ಆಯುಧಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಿರುವುದು ಅತ್ಯಂತ ಖಂಡನೀಯ ಹಾಗೂ ಆತಂಕಕಾರಿ ಘಟನೆಯಾಗಿದೆ. ಈ ಘಟನೆಯಿಂದ ರಾಜ್ಯದಲ್ಲಿರುವ ಪರಿಶಿಷ್ಟ ಸಮುದಾಯದ ಜನರಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆರೋಪಿತರಿಗೆ ಭೂಮಾನಂದ ಅವರೊಂದಿಗೆ ಹಿಂದಿನಿಂದಲೂ ವೈಷಮ್ಯವಿದ್ದು, ಗ್ರಾಮದ ದೇವಸ್ಥಾನಕ್ಕೆ ಪ್ರವೇಶ ನೀಡದಿರುವ ವಿಚಾರ ಹಾಗೂ ಅವರು ಟ್ರ್ಯಾಕ್ಟರ್ ಚಲಾಯಿಸಿಕೊಂಡು
ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿರುವುದನ್ನು ಸಹಿಸದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಕೊಲೆಗೂ ಮುನ್ನ ಆರೋಪಿಗಳು ಮಾರಕ ಆಯುಧಗಳನ್ನು ಹಿಡಿದುಕೊಂಡು ಭೂಮಾನಂದ ಅವರನ್ನು ಬೆದರಿಸಿರುವುದಾಗಿ ಹಾಗೂ ನಂತರ ಹಲವರು ಸೇರಿಕೊಂಡು ಅವರ ಮೇಲೆ ದಾಳಿ ನಡೆಸಿ ಕೊಲೆ ಮಾಡಿರುವುದಾಗಿ ಮೃತರ ಕುಟುಂಬದವರು ನೀಡಿರುವ ಮಾಹಿತಿಯಿಂದ ನಮಗೆ ತಿಳಿದುಬಂದಿದೆ. ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಅರೋಪಿಗಳ ವಿರುಧ್ದ ಕಠಿಣ ಕಾನೂನು ಕ್ರಮ ಕೈಗೊಂಡು ಮೃತರ ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ತಾಲೂಕು ಅಧ್ಯಕ್ಷರಾದ ಸುರೇಶ್ ಮಾತನಾಡಿ ಈ ದುರ್ಘಟನೆಯಲ್ಲಿ ಭೂಮಾನಂದ ಅವರ ಹಣೆಯ ಮೇಲೆ, ಬಲಭಾಗದ ಗದ್ದದ ಭಾಗದಲ್ಲಿ ಬಾಯಿ ಹತ್ತಿರ ಹಾಗೂ ಕುತ್ತಿಗೆಯ ಮೇಲೆ ತೀವ್ರವಾದ ಕತ್ತರಿಸಿದ ಗಾಯಗಳಾಗಿದ್ದು, ದೇಹದ ವಿವಿಧ ಭಾಗಗಳಲ್ಲಿಯೂ ಗಂಭೀರ ಗಾಯಗಳಾಗಿರುವುದು ನಮಗೆ ತಿಳಿದುಬಂದಿದೆ.
ಆದ್ದರಿಂದ ದಲಿತ ನಾಯಕ ಭೂಮಾನಂದ ಅವರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ, ನ್ಯಾಯಾಂಗ ತನಿಖೆ ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಬೀಮ ಸೇನೆ ಸಂಘಟನೆ ಒತ್ತಾಯಿಸಿ ಅಗ್ರಹಿಸಿದೆ.
ಈ ಸಂದರ್ಭದಲ್ಲಿ ದಂಡಪ್ಪ ಜಿಲ್ಲಾಉಪಾಧ್ಯಕ್ಷರು. ಬದ್ರೇಶ್ ಗೌರವ ಅಧ್ಯಕ್ಷರು.ಹಾಗೂ ಉಪಸ್ಥಿತರಿದ್ದರು.




















