ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸ್ವತಂತ್ರೋತ್ಸವ ದಿನವನ್ನು ಹಬ್ಬದ ಸಂಭ್ರಮವಾಗಿ ಆಚರಣೆ ಮಾಡಿದ ಶ್ರೀ ಸುವರ್ಣಮುಖಿ ಪ್ರೌಢಶಾಲೆ ಮಲ್ಲೇಕಾವು.

ಕೊರಟಗೆರೆ ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಮಲ್ಲೇಕಾವು ಗ್ರಾಮದಲ್ಲಿ ಶ್ರೀ ಸುವರ್ಣಮುಖಿ ಪ್ರೌಢಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಸ್ವಾತಂತ್ರ್ಯ ದಿನ ಪ್ರತಿಯೊಬ್ಬನ ಭಾರತೀಯರಿಗೆ ಹೆಮ್ಮೆಯ ದಿನ 1947 ಆಗಸ್ಟ್ 15 ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತರಾದ ದಿನವಿದು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ಮಹನೀಯರ ತ್ಯಾಗ ಬಲಿದಾನವನ್ನು ಸ್ಮರಿಸಲು ಈ ದಿನವನ್ನು ಸ್ವಾತಂತ್ರ್ಯ ಹಬ್ಬವಾಗಿ ಆಚರಿಸಲಾಗುತ್ತದೆ. ಶಾಲೆಯ ಮುಖ್ಯೋಪಾಧ್ಯಾಯರು ಧ್ವಜಾರೋಹಣ ಮಾಡಿ ಸ್ವಾತಂತ್ರ್ಯ ನೀಡಲು ಮಹನೀಯರು ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ ಅವುಗಳನ್ನು ಸ್ಮರಿಸುತ್ತಾ ನಾವು ಇಂದು ಸ್ವತಂತ್ರರಾಗಿ ಬಾಳುವಂತಾಗಿದೆ ಎಂದು ಮಕ್ಕಳಿಗೆ ಹೇಳಿದರು.

ಭಾರತವು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೇವೆ. ದೇಶಾದ್ಯಂತ ಧ್ವಜಾರೋಹಣ ದೇಶಭಕ್ತಿ ಕಾರ್ಯಕ್ರಮಗಳು ಮತ್ತು ಸ್ವತಂತ್ರ ಹೋರಾಟಗಾರರ ಸ್ಮರಣೆಯು ನಡೆಯುತ್ತಿದೆ.

ಪ್ರತಿ ವರ್ಷ ಆಗಸ್ಟ್ 15ರಂದು ದೇಶಭಕ್ತಿಯ ಉತ್ಸಾಹ ಧ್ವಜಾರೋಹಣ ಸಾಂಸ್ಕೃತಿ ಕಾರ್ಯಕ್ರಮ ನಾಯಕರ ಭಾಷಣ ದೇಶದ ಎಲ್ಲೆಡೆ ಇರುತ್ತದೆ ಹಾಗೆಯೇ ನಾವು ಇಂದು ಇಲ್ಲಿ ಎಲ್ಲರೂ ಸೇರುವುದು ಸ್ವಾತಂತ್ರ್ಯ ಹಬ್ಬದ ಆಚರಣೆ ಮಾಡಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನೆನಪು ಮಾಡಿಕೊಂಡು ಅವರಿಗೆ ನಮಸ್ಕರಿಸಿ ಸ್ವಾತಂತ್ರ್ಯದ ಮಹತ್ವದ ಜೊತೆಗೆ ನಮ್ಮ ಜವಾಬ್ದಾರಿಗಳೇನು ಎಂಬುದನ್ನು ಅರ್ಥ ಮಾಡಿಕೊಂಡು ದೇಶಕ್ಕೆ ನಾವು ಸಹ ಏನಾದರೂ ಕೊಡುಗೆ ನೀಡಬೇಕು. ದೇಶದ ಅಭಿವೃದ್ಧಿ ಪ್ರಜೆಗಳ ಅಭಿವೃದ್ಧಿ ನಾಡಿನ ಅಭಿವೃದ್ಧಿ ಒಂದು ಕುಟುಂಬದ ಅಭಿವೃದ್ಧಿ ನಿರಂತರವಾಗಿ ಸಾಗುತ್ತಿದ್ದರೆ ಅದಕ್ಕೆ ಕೊನೆ ಇಲ್ಲ ಅದುವೇ ಹಿಂದಿನ ಭಾರತವೇ ಸಾಕ್ಷಿ. ನಮ್ಮ ದೇಶದಲ್ಲಿ ಶಾಂತಿಯಿಂದ ಐಕ್ಯತೆ ಬೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಒಂದು ಕ್ಷೇತ್ರದಲ್ಲಿ ಏನಾದರೂ ಸಾಧಿಸುವ ಅವಕಾಶವಿದೆ ಎಂದರೆ ಅದು ನಮ್ಮ ಭಾರತದಲ್ಲಿ ಮಾತ್ರ.

ಇನ್ನು ಶಾಲೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಪಾರಿತೋಷಗಳನ್ನು ನೀಡಿದರು. ರೋಟರಿ ಕ್ಲಬ್ ವತಿಯಿಂದ ಎಲ್ಲಾ ಮಕ್ಕಳಿಗೂ ಪೆನ್ನು ಮತ್ತು ನೋಟ್ ಬುಕ್ ಗಳನ್ನು ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಗೋವಿಂದರಾಜು, ಆನಂದಕುಮಾರ್, ಸುಬ್ರಮಣ್ಯ, ಪ್ರಸನ್ನ ಕುಮಾರ್, ನರಸಿಂಹಮೂರ್ತಿ ವಿಕೆ, ಸುರೇಶ್ ಎನ್ ಯು, ಹೊನ್ನೇಶ್ ಪಿಕೆ,ಇನ್ನು ಅನೇಕ ಸ್ನೇಹ ಬಳಗ ಮತ್ತು ರೋಟರಿ ಕ್ಲಬ್ ಸದಸ್ಯರು ಎಲ್ಲರೂ ಸೇರಿ ಸಂಭ್ರಮ ದಿಂದ ಸ್ವತಂತ್ರ ದಿನವನ್ನು ಅದ್ದೂರಿಯಾಗಿ ದೇಶಭಕ್ತಿ ಮತ್ತು ರಾಷ್ಟ್ರಪ್ರೇಮದ ಸಂದೇಶದೊಂದಿಗೆ ಸಡಗರದಿಂದ ಆಚರಣೆ ಮಾಡಿದರು.

ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!