ಬಾಳೆ ಪೂಂಬೆಯೊಂದು ಗಾಳಿಗೆ ನಲುಗಿ ಬಿದ್ದಿತ್ತು
ಬಿಡಿಸಿ ಹೆಕ್ಕಿದ ಹೂಗಳ ಬೆರಳು ಜೋಡಿಸಿತ್ತು
ನಡುವಿಗೆ ಹಸಿರೆಲೆಗಳ ನೀಳವಾಗಿ ಇರಿಸಿತ್ತು
ಬಳಿಯಲಿದ್ದ ಪುಟ್ಟ ಪುಟ್ಟ ಪುಷ್ಪಗಳ ತಾಗಿಸಿತ್ತು
ಹೊರ ಪದರದ ಕೆಂಪಿನ ಗರಿಯಲಿ ಅಲಂಕರಿಸಿತ್ತು
ಕೆಲ ನಿಮಿಷಗಳಲಿ ಸುಲಲಿತ ಚಿತ್ತಾರವಾಗಿ ಅರಳಿತ್ತು
ಅಕ್ಷರಗಳ ಪೋಣಿಸಲು ಕಾವ್ಯವೊಂದು ಮೂಡಿತ್ತು
ಆಸ್ವಾದಿಸಲು ಆಳವಾಗಿ ಕಣ್ಮನಗಳಲಿ ಬೇರೂರಿತ್ತು
ಸುಮನಗಳಿಗೆ ರವಾನಿಸಲು ಅರುಣೋದಯವಾಗಿತ್ತು
ಓದುಗರಿಗೆ ಸಾಹಿತ್ಯದ ಸಾಲುಗಳು ಮುದ ನೀಡಿತ್ತು
- ಲಲಿತಾ ಕೆ ಆಚಾರ್ ಬೆಂಗಳೂರು




















