ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಸರ್ವ ಸದಸ್ಯರ ಸಭೆ.

ಶಿವಮೊಗ್ಗ /ಬೆಂಗಳೂರು : ಹಲವಾರು ವರ್ಷಗಳಿಂದ ವಿಕಲಚೇತನರ ಏಳಿಗೆಗಾಗಿ ಶ್ರಮಿಸುತ್ತಿರುವ 22 ಸಾವಿರ ಮೀರಿದ ಸದಸ್ಯತ್ವವನ್ನು ಹೊಂದಿ ಕೇಂದ್ರ ಮತ್ತು ರಾಜ್ಯ ಸರಕಾರದೊಡನೆ ಸಮಸ್ಯೆಗಳ ಪರಿಹಾರಕ್ಕಾಗಿ ಸಮನ್ವಯ ಸಾಧಿಸಲು ಯತ್ನಿಸುತ್ತಿರುವ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಸರ್ವ ಸಭೆಯು ಸಂಘದ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರ ನೇತೃತ್ವದಲ್ಲಿ ಗೂಗಲ್ ಮೀಟ್ ಮೂಲಕ ದಿ.15-8-2026 ರ ಶನಿವಾರ ಯಶಸ್ವಿಯಾಗಿ ಜರುಗಿತು.

ಅಸೋಸಿಯೇಷನ್ ಇದರ ನಿರ್ದೇಶಕಿ ಮತ್ತು ಗೂಗಲ್ ಮೀಟ್ ಸಂಚಾಲಕಿ ಶ್ರೀಮತಿ ಲಕ್ಷ್ಮಿ ಮನೋಜ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದರಲ್ಲದೆ ನಾನಾ ಕಾರಣಗಳಿಂದ ಮತ್ತು ನೆಟ್ವರ್ಕ್ ವಿಫಲತೆ ಕಾರಣದಿಂದ ಸಭೆಗೆ ಹಾಜರಾಗಲು ಸಾಧ್ಯವಾಗದ ಸದಸ್ಯರು ಮತ್ತು ಪದಾಧಿಕಾರಿಗಳ ಪರವಾಗಿ ಸ್ವಾಗತಿಸಿ ಮಾತನಾಡಿದರು. ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯದರ್ಶಿ ಡಾ . ಸುಮನಾ ಟಿ.ಎಂ. ಅವರು ರಾಷ್ಟ್ರಗೀತೆ ಮತ್ತು ವಂದೇ ಮಾತರಂ ಹಾಡಿ ಆರಂಭಿಕ ಪ್ರಾರ್ಥನೆಯನ್ನು ತಮ್ಮ ಸುಶ್ರಾವ್ಯ ಕಂಠದಿಂದ ಮೊಳಗಿಸಿ ಕಾರ್ಯಕ್ರಮಕ್ಕೆ ಕಲೆ ಮತ್ತು ಘನತೆಯನ್ನು ತಂದುಕೊಟ್ಟರು.

ಶ್ರೀ ಮಧುರ್ ಮಿಶ್ರ ನಿರ್ದೇಶಕ ಸ್ಥಾನದಿಂದ ಸಭೆಗೆ ಗೈರು ಹಾಜರಾಗಿರುವ ಕೋಶಾಧಿಕಾರಿ ಶ್ರೀಮತಿ ಟಿ. ಶಿವಮ್ಮ ಅವರ ಪರವವಾಗಿ ಅಡಿಟ್ ರಿಪೋರ್ಟ್ ಮತ್ತು ಲೆಕ್ಕ ಪತ್ರಗಳನ್ನು ಶ್ರೀಮತಿ ಲಕ್ಷ್ಮಿ ಮನೋಜ ಅವರ ಜೊತೆಯಲ್ಲಿ ಜಂಟಿಯಾಗಿ ಮಂಡಿಸಿ ಸದಸ್ಯರ ಒಪ್ಪಿಗೆ ಕೋರಿ ಪಡೆದುಕೊಂಡರಲ್ಲದೆ ನಿರ್ದೇಶಕರಲ್ಲೊಬ್ಬರಾದ ಶ್ರೀ ರಾಹುಲ್ ಜಾಧವ ಅವರು ವಂದನಾರ್ಪಣೆ ಸಲ್ಲಿಸಿದರು.
ಅಸೋಸಿಯೇಷನ್ ಕಾನೂನು ಸಲಹೆಗಾರರಾದ ವಕೀಲೆ ತನ್ವರ್ ಸವಿತಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!