ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕು ಸೇರಿದಂತೆ ಕ್ಷೇತ್ರದಲ್ಲಿ ಆರಂಭಗೊಂಡ ಭಾರತ್ ಜೋಡೋ ಯುವ ಸಂಘ ಸ್ಥಾಪನೆ ಸಂಬಂಧ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಭಾರತ್ ಜೋಡೋ ಯುವ ಮಿಷನ್‌ಗೆ ದೊಡ್ಡ ಬಸವರಾಜ ಬಡಗಿ ಅವರಿಂದ ಪ್ರಪ್ರಥಮ ಸದಸ್ಯತ್ವ ನೋಂದಣಿಯಾಗಿದೆ.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಜೆ.ಎನ್. ಗಣೇಶ್ ಅವರ ನಿರ್ದೇಶನದಂತೆ, ಕ್ಷೇತ್ರದಲ್ಲಿ ಭಾರತ್ ಜೋಡೋ ಯುವ ಮಿಷನ್ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ.
ಕಂಪ್ಲಿ ವಿಧಾನಸಭಾ ಕ್ಷೇತ್ರದ ಬೆಳಗೋಡು ಗ್ರಾಮದ ಕಾಂಗ್ರೆಸ್ ಮುಖಂಡರಾದ ದೊಡ್ಡ ಬಸವರಾಜ ಬಡಗಿ ಅವರು ಕ್ಷೇತ್ರದಲ್ಲಿ ಪ್ರಪ್ರಥಮವಾಗಿ ಭಾರತ್ ಜೋಡೋ ಯುವ ಮಿಷನ್ ಸದಸ್ಯತ್ವವನ್ನು ನೋಂದಾಯಿಸಿಕೊಂಡಿದ್ದರೆ. ಯುವಕರನ್ನು ಸಂಘಟಿಸಿ, ಸಾಮಾಜಿಕ ಸೇವೆ, ಜನಪರ ಕಾರ್ಯಗಳು ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭಾರತ್ ಜೋಡೋ ಯುವ ಮಿಷನ್‌ನೊಂದಿಗೆ ಕೈಜೋಡಿಸಲಾಗುವುದು. ಕ್ಷೇತ್ರದ ಯುವಕರನ್ನು ಒಗ್ಗೂಡಿಸಿ, ಸಾಮಾಜಿಕ ಸೇವೆ ಹಾಗೂ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ್ ಜೋಡೋ ಯುವ ಮಿಷನ್ ಮೂಲಕ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ಕ್ಷೇತ್ರದ ಪ್ರತಿಯೊಂದು ಗ್ರಾಮದ ಯುವಕರಿಗೂ ಸಂಘಟನೆಯ ಆಶಯಗಳನ್ನು ತಲುಪಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಯುವ ಮುಖಂಡ ದೊಡ್ಡ ಬಸವರಾಜ ಬಡಗಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















