ಬಳ್ಳಾರಿ / ಕಂಪ್ಲಿ :
ಷಾಮಿಯಾಚಂದ್ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ತಹಶೀಲ್ದಾರ್ ಜೂಗಲ ಮಂಜುನಾಯಕ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿದರು.
ನಂತರ ಮಾತನಾಡಿ,
ಭಾರತವು ವೈವಿಧ್ಯತೆಯಲ್ಲಿ ಏಕತೆ ಎಂಬ ವಿಶಿಷ್ಟ ಪರಂಪರೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಭಾಷೆ, ಧರ್ಮ, ಸಂಸ್ಕೃತಿ, ಆಚರಣೆ, ಜೀವನಶೈಲಿ ಹಾಗೂ ಭೌಗೋಳಿಕ ವೈವಿಧ್ಯಗಳ ನಡುವೆಯೂ ಭಾರತೀಯತೆಯ ಭಾವನೆ ನಮ್ಮೆಲ್ಲರನ್ನೂ ಒಂದಾಗಿಸುತ್ತದೆ. ಈ ಏಕತೆಯೇ ಭಾರತದ ದೊಡ್ಡ ಶಕ್ತಿಯಾಗಿದೆ, ಯುವಜನರು ಶೈಕ್ಷಣಿಕವಾಗಿ ಸದೃಢರಾಗಬೇಕು ಎಂದು ತಹಶೀಲ್ದಾರ್ ಜೂಗಲ ಮಂಜುನಾಯಕ ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್‍ರೆಹಮಾನ್, ಅಧಿಕಾರಿ ಗಳಾದ ಆರ್.ಕೆ. ಶ್ರೀಕುಮಾರ್, ಕೆ.ಬಿ. ವಾಸುಕುಮಾರ್, ಬಿ. ಮಲ್ಲಿಕಾರ್ಜುನ, ಶ್ರೀನಿವಾಸ್, ನರಸಪ್ಪ, ಸಿದ್ದಣ್ಣ ಪರಮೇಶ್ವರ, ಸುಜಾತ, ಡಾ.ಕೆ.ಯು. ಬಸವರಾಜ, ಟಿ.ಎಂ. ಬಸವರಾಜ, ಮುದುಕಪ್ಪ ನೆಲಜೇರಿ ಇದ್ದರು. ಪುರಸಭೆಯಲ್ಲಿ ಪ್ರಭಾರ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಲೆಕ್ಕಿಗ ರಮೇಶ ಬೆಳಂಕರ್, ಜೆಇ ಪಿ. ತೇಜಸ್ವಿನಿ ಸೇರಿದಂತೆ ತಾಲೂಕು ಆಡಳಿತ, ಪುರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















