ಬಳ್ಳಾರಿ / ಕಂಪ್ಲಿ : ಮುಸ್ಲಿಂ ಸಮಾಜದ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ನಿಟ್ಟಿನಲ್ಲಿ ಕಂಪ್ಲಿ ಸೇರಿದಂತೆ ಕ್ಷೇತ್ರದಲ್ಲಿ ಸುಮಾರು 60 ಕೋಟಿ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯದೊಂದಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ಗ್ರಾ. ಪಂ. ಬಳಿಯಲ್ಲಿ 2025-26ನೇ ಸಾಲಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಯೋಜನೆಯಡಿ ಸುಮಾರು 4.27 ಕೋಟಿ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡ ನಿರ್ಮಾಣ ಕಾಮಗಾರಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಕಂಪ್ಲಿ-ಕುರುಗೋಡು ವ್ಯಾಪ್ತಿಯಲ್ಲಿ ಸುಮಾರು 14 ಕೋಟಿಯಲ್ಲಿ ಮೊರಾರ್ಜಿ ದೇಸಾಯಿ ಶಾಲೆಯಾಗಿದೆ ಈಗ ಸುಮಾರು 4.27 ಕೋಟಿ ವೆಚ್ಚದ ಮೌಲಾನಾ ಆಜಾದ್ ಮಾದರಿ ಶಾಲೆ ಕಟ್ಟಡಕ್ಕೆ ಚಾಲನೆ ನೀಡಲಾಗಿದ್ದು, ಕಾಲ ಮಿತಿಯೊಳಗೆ ಕಾಮಗಾರಿ ಮುಗಿಸಿ, ಮಕ್ಕಳ ಶಿಕ್ಷಣಕ್ಕೆ ಅನುವು ಮಾಡಿಕೊಡಲಾಗುತ್ತದೆ. ಶಾದಿಮಹಾಲ್, ಖಬರ್ ಸ್ತಾನ್ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬರಲಾಗಿದೆ. ಕ್ಷೇತ್ರದ ಹೆಚ್.ವೀರಾಪುರದಲ್ಲಿ 10 ಎಕರೆ ಪ್ರದೇಶದಲ್ಲಿ ಸುಮಾರು 25-30 ಕೋಟಿ ವೆಚ್ಚದಲ್ಲಿ ಸಂತ ಶಿಶುನಾಳ ಶರೀಪ್ ಶಾಲೆ ಮಾಡಲಾಗುತ್ತದೆ. ಶಿಕ್ಷಣದಿಂದ ವಂಚಿತರಾದ ಮುಸ್ಲಿಂ ಸಮುದಾಯದ ಮಕ್ಕಳ ಶೈಕ್ಷಣಿಕ ಮಟ್ಟದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಮುಸ್ಲಿಂ ಸಮಾಜದ ಪ್ರತಿಯೊಂದು ಏಳಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ನಂತರ ಇಲ್ಲಿನ ಮಿನಿ ವಿಧಾನಸೌಧದ ಬಳಿಯಲ್ಲಿ ಕೆಕೆಆರ್ಡಿಬಿ ಮ್ಯಾಕ್ರೋ ಯೋಜನೆಯಡಿ ಸುಮಾರು 3 ಕೋಟಿ ವೆಚ್ಚದ ಕಾಂಪೌಂಡ್ಗೋಡೆ, ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಅಡಿಗಲ್ಲು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಸಿಂ ಧರ್ಮ ಗುರುಗಳಾದ ಸೈಯದ್ ಷಾ ಅಬುಲ್ ಹಸನ್ ಖಾದ್ರಿ, ಡಾ.ನೂರ್ ಸಾಹೇಬ್ ಸೈಯದ್ಉಮೇಸ್ ಖಾದ್ರಿ, ಸೈಯದ್ ಷಾ ಆಶ್ವ ಖಾದ್ರಿ, ಎಪಿಎಂಸಿ ಅಧ್ಯಕ್ಷ ಹಬೀಬ್ ರಹೆಮಾನ್, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಧಾನ ಕಾರ್ಯದರ್ಶಿ ರಘುನಾಯಕ, ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯ ಮುಖ್ಯಗುರು ಕೆ.ಬಸವರಾಜ ವಾರ್ಡ್ನ್ ಮಲ್ಲಪ್ಪ, ಮುಖಂಡರಾದ ಕೆ.ಎಸ್.ಚಾಂದ್ಬಾಷಾ, ಎಂ.ಉಸ್ಮಾನ್, ಲೊಡ್ಡು ಹೊನ್ನೂರವಲಿ, ಜಾಫರ್, ಸೈಯದ್ ಉಸ್ಮಾನ್, ಹೋಟೆಲ್ ಶೇಕ್ಷಾವಲಿ, ಕೆ.ಮೆಹಬೂಬ್, ಸಿ.ಆರ್.ಹನುಮಂತ, ಬಿ.ನಾರಾಯಣಪ್ಪ, ಕೆ.ಷಣ್ಮುಕಪ್ಪ, ಡಾ.ಎ.ಸಿ.ದಾನಪ್ಪ, ಬಿ.ನಬೀಸಾಬ್, ಪೇಂಟರ್ ಮಸ್ತಾನ್, ಕೋಟೆ ಗನಿಸಾಬ್, ಬಡಿಗೇರ್ ಆಜೀಜಸಾಬ್, ಆರ್. ಜಿಲಾನ್, ಶಬ್ಬಿರ್, ಎಂ.ಮಹಿಮೂದ್, ಜೈಯದ್ಉಲ್ಲಾ, ಅಬ್ದುಲ್ ವಾಹಿದ್, ಮೋದಿ, ಯಾಳ್ಪಿ ಅಬ್ದುಲ್ ಮುನಾಫ್, ಬಾಲೇಸಾಬ್, ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















