
ಕೊಟ್ಟೂರು: ಪ್ರತಿ ವರ್ಷ ಪದ್ಧತಿಯಂತೆ ಈ ವರ್ಷವೂ ಕೂಡ ಪಟ್ಟಣದ ಶಾನುಭೋಗರ ಮನೆಯಿಂದ ಧಾರ್ಮಿಕ ವಿಧಿ ವಿಧಾನಗಳಿಂದ ಗ್ರಾಮ ದೇವತೆ ಶ್ರೀ ಕೊಟ್ರಮ್ಮ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಶ್ರೀ ಕೊಟ್ರಮ್ಮ (ರೇಣುಕಾ) ದೇವಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಸಕಲ ವಾದ್ಯ ಮೇಳಗಳಿಂದ ಮೆರವಣಿಗೆ ಮುಖಾಂತರ ಗಚ್ಚಿನ ಮಠ ಮತ್ತು ಕೆಳಗೇರಿ ಶ್ರೀ ವೀರಾ ಆಂಜನೇಯ ಸ್ವಾಮಿ ದೇವಸ್ಥಾನದ ಮೂಲಕ ಚಿರಿಬಿ ರಸ್ತೆ ಬಳೆ ಇರುವ ಶ್ರೀ ಕೊಟ್ರಮ್ಮ ದೇವಾಲಯ ತಲುಪಿತು. ನಂತರ ಇಳಿ ಸಂಜೆಯಲ್ಲಿ ಭವ್ಯ ಉತ್ಸವಗಳು ಜರುಗಿತು. ಅಸಂಖ್ಯಾತ ಭಕ್ತರು ಸರತಿ ಸಾಲಿನಲ್ಲಿ ನಿಂತು ಹೂ ಹಣ್ಣು ತೆಂಗಿನ ಕಾಯಿಯನ್ನು ತಂದು ಶ್ರೀ ಕೊಟ್ರಮ್ಮ ದೇವಿಯ ದರ್ಶನ ಆಶೀರ್ವಾದ ಪಡೆದರು. ನಂತರ ಶ್ರೀ ಕೊಟ್ರಮ್ಮ ದೇವಿಯ ಜಾತ್ರೆ ಬುಧವಾರ ಸಂಜೆ ಜರುಗಿತು.
ವರದಿ: ಕೆ.ಗೋಣೆಪ್ಪ




















