ಗೋಡಂಬಿ ದ್ರಾಕ್ಷಿ ವಾಲ್ನಟ್ ಬಾದಾಮಿಗಳು
ಪೌಷ್ಟಿಕಾಂಶದ ಒರತೆಯ ಒಣ ಹಣ್ಣುಗಳು
ಘಮಿಸುವುವು ಪೂಜಾ ಪ್ರಸಾದಗಳ ಸಜ್ಜಿಗೆಯಲಿ
ಬಲು ಪ್ರಭಾವಶಾಲಿಯು ಸ್ವಸ್ತ ಆರೋಗ್ಯದಲಿ
ಮೂಡಿಹನಿಲ್ಲಿ ನಡುವೆ ಮೂಷಿಕ ಸುಲಲಿತ ಚಿತ್ತಾರದಲಿ
ಸುತ್ತಲೂ ಮೇಳೈಸಿವೆ ಇತರವು ಸಿಂಗಾರದಲಿ
ಸುಪ್ರಭಾತದಲಿ ಬರುತಿಹನು ತಮ್ಮಲ್ಲಿಗೆ ಕಾವ್ಯಾಲಂಕಾರದಲಿ
ಕೈಜೋಡಿಸುತ ಆಸ್ವಾದಿಸುವ ನಾವೆಲ್ಲಾ ಶುಭ ಗಳಿಗೆಯಲಿ
- ಲಲಿತಾ ಕೆ ಆಚಾರ್ ಬೆಂಗಳೂರು




















