
ಅತ್ನಿ ಗ್ರಾಮದ ಮಲ್ಲೇಶ ಗೌಡರವರ ಅಳಿಮಯ್ಯ ಷಣ್ಮುಖ MC ರವರ ಪುಣ್ಯಸ್ಮರಣೆಯ ಅಂಗವಾಗಿ ಅವರ ಮಗ ಖ್ಯಾತ ವೈದ್ಯರಾದ ಡಾ. ಪೂರ್ಣೇಶ್ Ortholedic surgeon ಮತ್ತು Spine surgeon ಹಾಗೂ ಕುಟುಂಬದವರು, ಪುಣ್ಯ ಆಸ್ಪತ್ರೆಯ ಸಹಯೋಗದಲ್ಲಿ, ಇಂದು ಅತ್ನಿಗ್ರಾಮದಲ್ಲಿ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದರು.
ಈ ಆರೋಗ್ಯ ಶಿಬಿರದ ಕಾರ್ಯಕ್ರಮಕ್ಕೆ ಸುಮಾರು 800 ಕ್ಕೂ ಅಧಿಕ ಮಂದಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ BSP ರಾಜ್ಯ ಮುಖಂಡ ಅತ್ನಿ ಹರೀಶ್, ಪ್ರಸ್ತುತ ದಿನಮಾನದಲ್ಲಿ ಉನ್ನತ ವಿದ್ಯೆ ಗಳಿಸಿದಂತೆ, ಆಡಂಬರ ಜೀವನಕ್ಕೋಸ್ಕರ ಕೆಲವು ಮಕ್ಕಳುಗಳು ತಂದೆ ತಾಯಿ ಅನ್ನುವುದನ್ನೇ ಮರೆತು ಹೆತ್ತ ತಂದೆ ತಾಯಿಯನ್ನು ವೃದ್ಧಶ್ರಮಕ್ಕೆ ಸೇರಿಸುತ್ತಿದ್ದೂ, ಇಲ್ಲಿ ಪೂರ್ಣೇಶ್ ರವರು ತನ್ನ ತಂದೆ ಆಸೆಯಂತೆ ಬಡಜನರಿಗೆ ಅನುಕೂಲವಾಗುವಂತೆ ಈ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಸಮಾಜದಲ್ಲಿ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಡಾ. ಪೂರ್ಣೇಶ್ ರವರು, ತಾನು ಹಿಂದೆ ಬೆಳೆದ ದಿನಮಾನಗಳನ್ನು ಗಮನದಲ್ಲಿ ಇಟ್ಟುಕೊಂಡು ನನ್ನ ವಿದ್ಯೆಯಿಂದ ನನ್ನ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಜನಗಳಿಗೆ ಉತ್ತಮವಾದ ಆರೋಗ್ಯವನ್ನು ಕಲ್ಪಿಸಿಕೊಡಬೇಕೆಂಬ ಜನಪರ ಕಾಳಜಿಯನ್ನು ಇಟ್ಟುಕೊಂಡು, ಪುಣ್ಯ ಆಸ್ಪತ್ರೆಯ ಸಹಯೋಗದೊಂದಿಗೆ ಎಲ್ಲಾ ತರಹದ ತಜ್ಞ ವೈದ್ಯರನ್ನು ಕರೆಸಿ ಜನಗಳಿಗೆ ಸಹಕಾರಿಯಾಗುತ್ತಿರುವುದು,
ಗ್ರಾಮಕ್ಕೆ ಹೆಮ್ಮೆ ತರಿಸಿದೆ ಎಂದು ಹೇಳುತ್ತಾ, ನಮ್ಮಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿ. ಗ್ರಾಮಸ್ಥರ ಪರವಾಗಿ ಡಾ. ಪೂರ್ಣೇಶರವರಿಗೆ ಮತ್ತು ಅವರ ತಾಯಿಯಾದ ಜಾನಕಿರವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪುಣ್ಯ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ಮಹೇಶ್ ರವರು, ಡಾ. ನಂದನ್ ರವರು, ಡಾ. ಶರತ್ ರವರು, ಡಾ ಪ್ರೀತಮ್ ರವರು ಡಾ ಯಶವಂತ್ ರವರು, ಹಾಗೂ ಇನ್ನಿತರ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತು ಗ್ರಾಮದ ಲೋಕೇಶ್ ರವರು ಮನುಕುಮಾರ್ ರವರು ಕೃಷ್ಣೆಗೌಡ ರವರು ಕುಟುಂಬದವರು ಉಪಸ್ಥಿತರಿದ್ದರು.
ವರದಿ: ಸುಧೀಂದ್ರ ಡಿ., ಅರಕಲಗೂಡು




















