ಮುಗಿಲೆತ್ತರದ ಮರದಡಿಯ ಸುತ್ತ ಉದುರಿದ್ದ ಪಕಳೆಗಳು
ಉದ್ದುದ್ದ ತೊಟ್ಟುಗಳ ಶ್ವೇತ ವರ್ಣದ ಪುಷ್ಪಗಳು
ಜೊತೆಯಲಿ ನಡುವಿಗೆ ಜೋಡಿಸಲು
ವೀಳೆದೆಲೆಗಳು
ಮೂರೂ ದಿಕ್ಕುಗಳಲಿ ಇರಿಸಲು ಹಸಿರೆಲೆ ಕುಡಿಗಳು
ಕೆಂಪು ಗುಲಾಬಿ ದಳಗಳನು ಅಲ್ಲಲ್ಲಿ ಸಿಂಗರಿಸಲು
ಅರುಣರಾಗದಿ ಮೂಡಿತು ಸುಲಲಿತ ಚಿತ್ತಾರದ ಹೊನಲು
ಅಕ್ಷರಗಳ ಪೋಣಿಸಲು ಪಸರಿಸಿತು ಕಾವ್ಯದ ಘಮಲು
ಅರ್ಪಿಸಲು ಸುಮನಗಳಿಗಿದುವೆ ಹರುಷದಾ ಕಡಲು
- ಲಲಿತಾ ಕೆ ಆಚಾರ್ ಬೆಂಗಳೂರು




















