ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂಕೇನಹಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಕುಬೇರ ಗಣಪತಿ ಪ್ರತಿಷ್ಠಾಪನೆ.

9 ವರ್ಷಗಳ ಗ್ರಾಮಸ್ಥರ ಪ್ರಯತ್ನ ಕನಸು ನನಸಾಗಿದೆ | ದೇವಸ್ಥಾನ, ಸಮುದಾಯ ಭವನ, ರಾಜಗೋಪುರ ಉದ್ಘಾಟನೆ.

ಕೊರಟಗೆರೆ: ತಾಲೂಕಿನ ಎಲೆರಾಂಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದಲ್ಲಿ ನೂತನ ಕುಬೇರ ಗಣಪತಿ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನೆ, ಸಮುದಾಯ ಭವನ ಮತ್ತು ರಾಜಗೋಪುರ ಉದ್ಘಾಟನಾ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ಗ್ರಾಮಸ್ಥರು ಕಳೆದ ಒಂಬತ್ತು ವರ್ಷಗಳಿಂದ ಕಂಡಿದ್ದ ಕನಸು ಇದೀಗ ನನಸಾಗಿದ್ದು, ನೂತನ ದೇವಸ್ಥಾನದ ಉದ್ಘಾಟನೆಯ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಎಲೆರಾಂಪುರ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ, ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ, ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಸೇರಿದಂತೆ ಗಣ್ಯರು ಭಾಗವಹಿಸಿ ಕುಬೇರ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮಗಳ ಅಭಿವೃದ್ಧಿಗೆ ಕೈಜೋಡಿಸಿ: ಪಿ.ಎನ್. ಕೃಷ್ಣಮೂರ್ತಿ

ಸಮಾಜ ಸೇವಕ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಮಾತನಾಡಿ, ಪ್ರತಿಯೊಂದು ಹಳ್ಳಿಯಲ್ಲಿರುವ ಸಿರಿವಂತರು ಹಾಗೂ ಅನುಕೂಲಸ್ಥರು ತಮ್ಮ ಕೈಲಾದ ರೀತಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ದೇವಸ್ಥಾನಗಳು ನಮ್ಮ ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಯನ್ನು ಉಳಿಸುವ ಕೇಂದ್ರಗಳಾಗಿವೆ. ದೇವಸ್ಥಾನವು ಮನುಷ್ಯ ಮತ್ತು ದೇವರ ನಡುವಿನ ಸಂಪರ್ಕ ನಿತ್ಯದ ಒತ್ತಡದಿಂದ ಮನಸ್ಸಿಗೆ ಶಾಂತಿ ಸಿಗಲು ದೇವಾಲಯಗಳ ಮೊರೆ ಹೋಗುವುದು ಪದ್ಧತಿ. ಈ ರೀತಿಯ ಪೂಜೆ ಮತ್ತು ಉತ್ಸಾಹಗಳು ಜನರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತದೆ. ಇದೇ ರೀತಿಯಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಉತ್ತಮ ದೇವಾಲಯಗಳು, ಮಠಗಳು, ಶಾಲೆಗಳು ಇರಬೇಕು. ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳ ಅರಿವು ಮೂಡಿಸುವ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲಿದೆ . ಹಾಗೂ ನಮ್ಮ ಕ್ಷೇತ್ರದಲ್ಲಿ ನಾನು ಬಡವರಿಗಾಗಿ ಆರು ಹೋಬಳಿಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಿ ಉಚಿತವಾಗಿ ಶುಭಕಾರ್ಯಗಳು ಮಾಡಿಕೊಳ್ಳಲು ನನ್ನ ಮತ ಬಾಂಧವರಿಗೆ ಅನುಕೂಲವಾಗಲೆಂದು ನಿರ್ಮಾಣ ಮಾಡಿಕೊಡುವೆ ಎಂದು ಹೇಳಿದರು.

ಹುಟ್ಟೂರಿಗೆ ಕೊಡುಗೆ ನೀಡುವುದು ಕರ್ತವ್ಯ :
ನೀಲೇಶ್

ಉದ್ಯಮಿ ನೀಲೇಶ್ ಮಾತನಾಡಿ, ನಾವು ಎಲ್ಲೇ ಇದ್ದರೂ, ಹೇಗೆ ಇದ್ದರೂ ಹುಟ್ಟಿದ ಗ್ರಾಮವನ್ನು ಮರೆಯಬಾರದು. ನಮ್ಮ ಗ್ರಾಮಕ್ಕೆ ನಮ್ಮ ಕೈಲಾದಷ್ಟು ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಗ್ರಾಮಗಳ ಅಭಿವೃದ್ಧಿಗೆ ಹಣದ ಜತೆಗೆ ಸಮಯ, ಶ್ರಮ ಮತ್ತು ಮಾರ್ಗದರ್ಶನ ನೀಡುವ ಮೂಲಕವೂ ಸೇವೆ ಸಲ್ಲಿಸಬಹುದು. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸುವುದು ಎಲ್ಲರ ಜವಾಬ್ದಾರಿ ಎಂದರು.

ತಂದೆ-ತಾಯಿಯ ಸೇವೆ ಮಾಡಬೇಕು: ಡಾ. ಹನುಮಂತನಾಥ ಸ್ವಾಮೀಜಿ
ಎಲೆರಾಂಪುರ ಮಠದ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಗಣಪತಿ, ಕುಬೇರ ಮತ್ತು ಲಕ್ಷ್ಮಿ ದೇವಿಯರ ಜಂಟಿ ಪೂಜೆ ಅಥವಾ ಮಂತ್ರ ಜಪಿಸುವುದರಿಂದ ಆರ್ಥಿಕ ತೊಂದರೆಗಳು ನಿವಾರಣೆಯಾಗಿ ಧನ-ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆಯಿದೆ.48 ದಿನಗಳ ಕಾಲ ನಿಷ್ಠೆ, ಭಕ್ತಿ ಮತ್ತು ಶ್ರದ್ಧೆಯಿಂದ ಗಣೇಶನ ಪೂಜೆ ಮಾಡುವುದರಿಂದ ಭಗವಂತನ ಅನುಗ್ರಹ ದೊರೆಯುತ್ತದೆ. ಆದರೆ ದೇವರ ಆರಾಧನೆಯ ಜತೆಗೆ ತಂದೆ-ತಾಯಿಯ ಸೇವೆ ಮಾಡುವುದು ಅತ್ಯಂತ ಮುಖ್ಯ. ಹಿರಿಯರನ್ನು ಗೌರವಿಸಿ, ಸತ್ಯ, ಧರ್ಮ ಮತ್ತು ನೀತಿಯ ಮಾರ್ಗದಲ್ಲಿ ಜೀವನ ನಡೆಸಬೇಕು ಎಂದು ತಿಳಿಸಿದರು.

ಮಕ್ಕಳಿಗೆ ಸಂಸ್ಕಾರ ಕಲಿಸಿ:
ವೀರ ಬಸವಲಿಂಗ ಸ್ವಾಮೀಜಿ
ಕಾರದ ಮಠದ ಶ್ರೀ ವೀರ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಅಲ್ಲ, ಸಂಸ್ಕಾರವಂತರನ್ನಾಗಿಯೂ ಬೆಳೆಸಬೇಕು. ಮೊಬೈಲ್ ಹಾಗೂ ಟಿವಿಯ ಬಳಕೆಯನ್ನು ಕಡಿಮೆ ಮಾಡಿ ಕುಟುಂಬದ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಬೇಕು. ‘ಎ’ ಎಂದರೆ ಅಪ್ಪ-ಅಮ್ಮ, ‘ಬಿ’ ಎಂದರೆ ಬಂಧು-ಬಳಗ ಎಂಬಂತೆ ಸಂಬಂಧಗಳ ಮಹತ್ವವನ್ನು ತಿಳಿಸಬೇಕು. ತಂದೆ-ತಾಯಿ, ಗುರುಗಳು ಹಾಗೂ ಹಿರಿಯರನ್ನು ಗೌರವಿಸುವ ಗುಣವನ್ನು ಬಾಲ್ಯದಿಂದಲೇ ಬೆಳೆಸಬೇಕು ಎಂದು ಕರೆ ನೀಡಿದರು.

ಗ್ರಾಮಸ್ಥರ ಒಗ್ಗಟ್ಟಿನ ಫಲ : ಶ್ರೀನಾಗ್

ಉದ್ಯಮಿ ಶ್ರೀನಾಗ್ ಮಾತನಾಡಿ, ಸಂಕೇನಹಳ್ಳಿ ಗ್ರಾಮದಲ್ಲಿ ‘ಕುಬೇರ ಗಣಪತಿ’ ಎಂಬ ಹೆಸರು ಮೂಡಿಬರಲು ಪ್ರಮುಖ ಕಾರಣ ಗ್ರಾಮಸ್ಥರ ಭಕ್ತಿ, ಒಗ್ಗಟ್ಟು ಮತ್ತು ಸಂಕಲ್ಪ. ಗ್ರಾಮಸ್ಥರೆಲ್ಲರೂ ಒಂದಾಗಿ ನಿಂತು ದೇವಸ್ಥಾನದ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಕುಬೇರ ಗಣಪತಿಯು ಹಿಂದೂ ಧರ್ಮದಲ್ಲಿ ಸಂಪತ್ತು, ಸಮೃದ್ಧಿ ಮತ್ತು ವಿಘ್ನ ನಿವಾರಣೆಯ ಸಂಕೇತವಾಗಿದ್ದು, ಗಣೇಶ ಹಾಗೂ ಕುಬೇರರ ಜಂಟಿ ಪೂಜೆಯಿಂದ ಆರ್ಥಿಕ ತೊಂದರೆಗಳು ದೂರಾಗುತ್ತವೆ.ಇದು ಕೇವಲ ದೇವಸ್ಥಾನವಲ್ಲ, ಗ್ರಾಮದ ಜನರ ಒಗ್ಗಟ್ಟು ಹಾಗೂ ಭಕ್ತಿಯ ಪ್ರತೀಕವಾಗಿದೆ. ಇದೇ ಒಗ್ಗಟ್ಟಿನಿಂದ ಮುಂದಿನ ದಿನಗಳಲ್ಲಿಯೂ ಗ್ರಾಮದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಸಹಸ್ರಾರು ಭಕ್ತರ ಉಪಸ್ಥಿತಿ :

ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನಸಂತರ್ಪಣೆ ನಡೆಯಿತು. ಸಂಕೇನಹಳ್ಳಿ, ಗೋಕುಲ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಿಂದಲೂ ಸಹಸ್ರಾರು ಭಕ್ತರು ಆಗಮಿಸಿ ಕುಬೇರ ಗಣಪತಿಯ ದರ್ಶನ ಪಡೆದು ಪುನೀತರಾದರು. ಭಕ್ತರ ಹೆಚ್ಚಿನ ಸಂಖ್ಯೆಯ ಆಗಮನದಿಂದ ಇಡೀ ಸಂಕೇನಹಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಒಂಬತ್ತು ವರ್ಷಗಳ ಗ್ರಾಮಸ್ಥರ ನಿರಂತರ ಪ್ರಯತ್ನ ಹಾಗೂ ಒಗ್ಗಟ್ಟಿನ ಫಲವಾಗಿ ನಿರ್ಮಾಣಗೊಂಡಿರುವ ಕುಬೇರ ಗಣಪತಿ ದೇವಸ್ಥಾನ ಇದೀಗ ಗ್ರಾಮದ ಭಕ್ತಿ ಮತ್ತು ಸಂಸ್ಕೃತಿಯ ಕೇಂದ್ರವಾಗಿ ಹೊರಹೊಮ್ಮಿದೆ.

ವರದಿ .ಪ್ರಸನ್ನ ಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!