
ಬಳ್ಳಾರಿ / ಕಂಪ್ಲಿ : ಕಂಪ್ಲಿ-ಕೋಟೆಯಲ್ಲಿ ಗಂಗಾಮತ ಸಮಾಜ ಹಾಗೂ ಸ್ಥಳೀಯ ವರ್ಗದ ಸಹಕಾರದೊಂದಿಗೆ ಆರಾಧ್ಯ ದೇವರಾದ ಶ್ರೀ ಗ್ರಾಮ ದೇವತೆ ದ್ಯಾವಮ್ಮ, ಹುಲಿಗೆಮ್ಮ ದೇವಿಯ ಗಂಗೆಸ್ಥಳ ಮೆರವಣಿಗೆ ಶ್ರದ್ಧಾಭಕ್ತಿಯಿಂದ ಮಂಗಳವಾರ ಜರುಗಿತು.
ಇಲ್ಲಿನ ಕೋಟೆಯ ತುಂಗಭದ್ರ ನದಿ ತಟದಲ್ಲಿ ಗಂಗೆಪೂಜೆ ಸಲ್ಲಿಸಿದ ನಂತರ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಇಲ್ಲಿನ ಮೆರವಣಿಗೆಯಲ್ಲಿ ತಾಷಾರಾಂಡೋಲ್, ಡೊಳ್ಳು ಕುಣಿತ, ಮಂಗಳವಾಧ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದರು. ಸಾಕಷ್ಟು ಭಕ್ತರು ದೇವಿಯರ ದರ್ಶನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಗಂಗಾಮತ ಸಮಾಜದ ಗೌರವಾಧ್ಯಕ್ಷ ಗಂಜಿ ಹನುಮಂತಪ್ಪ, ಕಂಬತ್ ಕೃಷ್ಣ, ದೇವಸ್ಥಾನ ಸಮಿತಿ ಅಧ್ಯಕ್ಷ ಅದ್ದಪ್ಪ ತಿಮ್ಮಪ್ಪ, ಸದಸ್ಯ ರಮೇಶ್ ಕಂಬತ್, ಮುಖಂಡರಾದ ಸೆರೆಗಾರ ನಾಗರಾಜ, ಕಟ್ಟೆ ಸಣ್ಣ ದುರುಗಪ್ಪ, ಕಟ್ಟೆ ವೀರಣ್ಣ ಸೂಗೂರು, ಕಟ್ಟೆ ವಿರೇಶ, ಸೆರೆಗಾರ ಕೃಷ್ಣ, ಬಿ.ರಮೇಶ, ಬಾಗ್ಲಿ ಮಂಜು, ಕಂಬತ್ ಧನ್ರಾಜ್ ಸೇರಿದಂತೆ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















