ಚಿಗುರು ಗರಿಎಲೆ ಅಲ್ಲಲ್ಲಿ ಹರಡಿತ್ತು ಭುವಿಯಲಿ
ಅರಳಿತ್ತೆರಡು ನೇತ್ರಗಳು ತುಸು ಅನುಕಂಪದಲಿ
ಎಚ್ಚರಿಸಿತು ಸೃಜನಶೀಲ ಜಾಗೃತಿ ಆಂತರ್ಯದಲಿ
ಪ್ರೇರೇಪಿಸಿತೆನ್ನ ಚಿತ್ತ ಪರಿಚಯಿಸಲು ಚಿತ್ತಾರದಲಿ
ಮುಂಜಾವಿನ ಪಾನಕಕೆ ಬೀಟ್ರೂಟನು ತುರಿಯಲು
ಗೋಲಾಕಾರದಿ ಗರಿಗಳ ಜೊತೆಯಲಿ ಸೇರಿಸಲು
ಹಲ್ಲುಜೋಳ ಕಲ್ಲಂಡಿಸಿಪ್ಪೆ ಹೂಗಳಲಿ ಸಿಂಗರಿಸಲು
ರೂಪುಗೊಂಡಿರುವ ನವ್ಯಕಾವ್ಯ ಚಿತ್ತಾರದ ಹೊನಲು
- ಲಲಿತಾ ಕೆ ಆಚಾರ್, ಬೆಂಗಳೂರು




















