ನೆಲದಲಿ ಹರಡಿದ ದಳಗಳ ಆರಿಸಿದೆ
ಕ್ರಿಯಾಶೀಲ ವೃತ್ತವನು ತಯಾರಿಸಿದೆ
ಮೂಸಂಬಿ ಸಿಪ್ಪೆಯನು ನಡುವಲಿರಿಸಿದೆ
ಸುತ್ತಲೂ ಅವರೆ ಬೀಜಗಳ ಜೋಡಿಸಿದೆ
ವರ್ಣಮಾಲೆಯಲಿ ಅಕ್ಷರಗಳ ಹೆಕ್ಕಿದೆ
ಪದಗಳ ಜೋಡಿಸಿ ವಾಕ್ಯಗಳ ಮಾಡಿದೆ
ಓದುತ ಓದುತ ಕಾವ್ಯವ ಹೆಣೆದೆ
ಸುಪ್ರಭಾತವ ತಿಳಿಸಲು ಸುಲಲಿತ ಚಿತ್ತಾರದೆ
- ಲಲಿತಾ ಕೆ ಆಚಾರ್, ಬೆಂಗಳೂರು




















