ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಭ್ಯ ಸರಳ ವ್ಯಕ್ತಿತ್ವದ ತಾರಿವಾಳ ವಕೀಲರು

ವಿಶೇಷ ವರದಿ: ಎಸ್ಕೆ ಕೊನೆಸಾಗರ

ಹುನಗುಂದ : ಇವರು ಕೇವಲ ಇನ್ನೊಂದೇ ವರ್ಷ ಪೂರೈಸಿದ್ದರೆ ಇವರಿಗೆ ೭೫ ವಸಂತಗಳು ತುಂಬುತ್ತಿದ್ದವು. ಸುಮಾರು ಆರು ದಶಕದಿಂದ ವಕೀಲಿ ವೃತ್ತಿಯಲ್ಲಿ ಇದ್ದ ಸರಳ ಜೀವಿ. ಸರಳತೆ, ಸಭ್ಯತೆ, ಸಹನೆ ಗುಣ, ಮಿತಿ ಮಾತಿನ ನಮ್ಮ ಹುನಗುಂದದ ಹಿರಿಯ ವಕೀಲರಾದ ಎಸ್. ಎಸ್. ತಾರಿವಾಳ ಅವರು ನಮ್ಮಿಂದ ದೂರ ಆದರೂ ಅವರು ನೆನಪು ಮಾತ್ರ ಯಾವತ್ತೂ ಮಾಸದು.

ಹುನಗುಂದದ ಸಭ್ಯ ತಾರಿವಾಳ ಮನೆತನದ ಇವರು ೧೯೭೭ ಸುಮಾರಿಗೆ ಕಾನೂನು ಪದವಿ ಪಡೆದು ಸ್ವಂತ ಊರಲ್ಲಿಯೇ ವಕೀಲಿ ವೃತ್ತಿ ಆರಂಭಿಸಿದರು. ಅದೇ ಸಮಯಕ್ಕೆ ಹುನಗುಂದದ ಪುರಸಭೆ ಸದಸ್ಯರಾಗಿಯೂ ಕಾರ್ಯ ಮಾಡಿದರು. ಮನಸ್ಸು ಮಾಡಿದ್ದರೆ ಹುನಗುಂದ ಬಿಟ್ಟು ಹೊರ ಹೋಗಿದ್ದರೆ ದೊಡ್ಡ ವಕೀಲರಾಗಬಹುದಿತ್ತು. ಹಣ, ಹೆಸರು ಮತ್ತು ಅಂತಸ್ತು ಗಳಿಸಬಹುದಿತ್ತು. ಆದರೆ ಊರು ಮೇಲಿನ ಮೋಹವೋ ಅಥವಾ ಮನೆಯ ಪರಿಸ್ಥಿತಿಯೋ ಇಲ್ಲಿಯೇ ಉಳಿಯಬೇಕಾಯಿತು. ಕೊನೆಯ ತನಕವೂ ಇಲ್ಲಿಯೇ ಇದ್ದು ಸರಳ ಜೀವನ ಸಾಗಿಸಿದ್ದು ನಮಗೆಲ್ಲ ಮಾದರಿ.
ಕುಟುಂಬ ವತ್ಸಲರಾದ ಇವರು ಮನೆ ಮತ್ತು ತಮ್ಮ ಸುತ್ತಲಿನವರಿಗೆ ತಮ್ಮ ಇರುವಿಕೆಯಿಂದ ಸರಳತೆಯ ಪಾಠ ಮಾಡಿದರು. ಆಕಸ್ಮಿಕವಾಗಿ ಒಮ್ಮೆ(೧೯೭೭) ರಾಜಕೀಯಕ್ಕೆ ಬಂದು ನಂತರ ಆ ಕಡೆ ಹೊರಳಿ ನೋಡಲಿಲ್ಲ. ನಾನು ನೋಡಿದಂತೆ ವಯೋವೃದ್ಧ ತಾಯಿಯ ಪಾಲನೆ ಮಾಡಿದ ರೀತಿ ಎಂಥವರನ್ನೂ ಬೆರಗುಗೊಳಿಸುತ್ತದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ (ಸುಮಾರು ೧೯೨೩ರಲ್ಲಿ ಆರಂಭ ಆಗಿದೆ ಎನ್ನಲಾಗಿದೆ) ಹುನಗುಂದದಲ್ಲಿ ನ್ಯಾಯಾಲಯ ಇತ್ತು. ಆ ಕಾಲದ ಹಿರಿಯ ವಕೀಲರಾದ ಆರ್.ವ್ಹಿ.ದೇಶಪಾಂಡೆ, ಜಿ.ಪಿ.ನಂಜಯ್ಯನಮಠ, ಸಿ.ಎನ್.ಮಠ, ಎಂ.ವ್ಹಿ. ನಾವಲಗಿ, ಆರ್.ಎಲ್. ಸುರಪುರ, ಜಿ.ಎನ್. ಸೋಲಾಪುರಮಠ, ವ್ಹಿ.ಎಂ.ಹಿರೇಮಠ ವ್ಹಿ.ಎಂ.ಮಾದಾಪುರ ಮುಂತಾದವರನ್ನು ನೋಡುತ್ತಾ ಅವರುಗಳ ಮಾರ್ಗದರ್ಶನದಲ್ಲಿ ವೃತ್ತಿ ಆರಂಭಿಸಿ ಮುಂದೆ ಸಾಗಿ ತೃಪ್ತಿ ಕಂಡವರು.
ಹುನಗುಂದ -ಬಾಗಲಕೋಟೆ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬಳೂಟಗಿ ಅವರ ಕಟ್ಟಡದ ಸಣ್ಣ ಕೋಣೆಯಲ್ಲಿ ಕಚೇರಿ ಮಾಡಿ ಇಂದಿಗೂ ಅಲ್ಲಿಯೇ ಇದ್ದರು. ಸಧ್ಯ ಅವರು ಮಗ ಶಿವಕುಮಾರ ವಕೀಲರು. ತಂದೆಯ ಆದರ್ಶ ಮತ್ತು ಸರಳ ಜೀವನ ಮಾದರಿಯಲ್ಲಿ ನಡೆಯುತ್ತಿದ್ದಾರೆ.
ಇಂದು ವಕೀಲಿ ವೃತ್ತಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿದೆ. ಸಮಾಜದಲ್ಲಿ ಸಾಕಷ್ಟು ಪ್ರಭಾವ ಬೀರುತ್ತಿದೆ. ಆದರೆ ತಾರಿವಾಳ ಅವರು ಹಣ, ಅಧಿಕಾರ, ಪ್ರಚಾರದ ಮೋಹಗಳಿಂದ ಸ್ವಲ್ಪ ದೂರವಿದ್ದ ಸ್ಥಿತಪ್ರಜ್ಞರು ಎಂದರೆ ಅತಿಶಯೋಕ್ತಿಯಲ್ಲ.
ಸಾಹಿತ್ಯ, ಸಂಸ್ಕೃತಿ, ಕಲಾರಾಧಕರಾಗಿದ್ದ ಇವರು ಉತ್ತಮ ವಿನೋದ ಪ್ರಿಯರೂ ಆಗಿದ್ದರು. ಹುನಗುಂದದ ಅಭಿವೃದ್ಧಿಗೆ ಸದಾ ಆಲೋಚಿಸಿ ಸಂಬಂಧಿಸಿದವರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಜನ ಕಾಳಜಿಯನ್ನು ಹೊಂದಿದ್ದ ಅವರ ನಿಷ್ಪ್ರಹತೆಯು ಸರಳ ವ್ಯಕ್ತಿತ್ವಕ್ಕೆ ಸಾಕ್ಷಿ.
ಅಂತಲೇ ಇವರು ನೆನಪು ಮಾಸದು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!