೧. ಭಾರತ.
ಜಾತಿ ಜಂಜಡದಿಂದ
ಜರ್ಜರಿತವಾಗುತ್ತಿರುವ
ಜನಭರಿತ, ದೇಶ ಭಾರತ!
೨. (ಅ)ಸಮಾನತೆ.
ಇವ ನಮ್ಮವ,
ಇವ ನಮ್ಮವ, ಎಂದರು,
ಬಸವಾದಿ ಪ್ರಮಥರು,
ಇವನಾರವ, ಇವನಾರವ
ಎನ್ನುತಿರುವರು ಆಧುನಿಕರು!
೩. ಕಟ್ಟೋಣ.
ಕಟ್ಟುವುದು ಬೇಡ ಅಲ್ಲಿ
ಮಸೀದಿ, ಮಂದಿರ,
ಕಟ್ಟೋಣ ನಾವಿಲ್ಲಿ
ಮನೋ ಮಂದಿರ,
ಆದೀತು ಆಗ ಈ ಜಗ
ಸುಂದರ.
೪. ಕವಿ.
ಅಕ್ಷರಗಳಿಗೆ ಜೀವ ನೀಡಿ
ಭಾವದುಂಬಿ ವರ್ಣಿಸುವ
ಶಬ್ದ ಮಾಂತ್ರಿಕನೀತ,
ಇವನಿಗೆ ಕವಿ ಎಂಬ ಹೆಸರು, ಅನ್ವರ್ಥಕ.
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ. 583231.




















