ಕೊಟ್ಟೂರು: ಮಾದಿಗರು ಈ ದೇಶವನ್ನು ಆಳಿದ ರಾಜ್ಯ ಮನೆತನದವರು ಭೂಮಂಡಲದ ಮೂಲ ನಿವಾಸಿಗಳು ನಾವು ನಮ್ಮ ಜಾತಿಯನ್ನು ಗರ್ವದಿಂದ ಹೇಳಿಕೊಳ್ಳೋಣ ಆದರೆ ನಮ್ಮ ದುರ್ದೈವ ನೂರಾರು ವರ್ಷಗಳಿಂದ ತುಳುತಕ್ಕೆ ಒಳಗಾದ ನಮ್ಮ ಸಮಾಜದ ಕುಲಬಾಂಧವರಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಕರ್ನಾಟಕ ಮಾದರ ಮಹಾಸಭಾ ಸಮುದಾಯಗಳ ಜನಾಂಗದವರು ಆರ್ಥಿಕ ಸಾಮಾಜಿಕ ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿರುವುದರಿಂದ ಅವರನ್ನು ಈ ಎಲ್ಲಾ ಕ್ಷೇತ್ರಗಳಲ್ಲಿ ನಿರಂತರವಾಗಿ ಅಭಿವೃದ್ಧಿ ಹೊಂದುವಂತೆ ಮಾಡುವುದೇ ಕರ್ನಾಟಕ ಮಾದರ ಮಹಾಸಭಾದ ಮೂಲ ಉದ್ದೇಶ ಆದಕಾರಣ ನಮ್ಮ ಸಮಾಜದ ಪ್ರತಿಯೊಬ್ಬರೂ ಸದಸ್ಯತ್ವ ಅಭಿಯಾನ ನೋಂದಣಿಯ ಕಾರ್ಡನ್ನು ಮಾಡಿಸಬೇಕು ಎಂದು ವಿಜಯನಗರ ಜಿಲ್ಲಾ ಅಧ್ಯಕ್ಷ ನಿಂಬಗಲ್ ರಾಮಕೃಷ್ಣ ಕೊಟ್ಟೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ನಂತರ ವಿಜಯನಗರ ಜಿಲ್ಲಾ ಕಾರ್ಯದರ್ಶಿಯಾದ ಬದ್ದಿ ಮರಿಸ್ವಾಮಿಯವರು ನಮ್ಮ ಸಮುದಾಯಗಳ ಜನಾಂಗದ ಅಭಿವೃದ್ಧಿಗಾಗಿ ಶಾಲೆಗಳು ಕಾಲೇಜುಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವುದು ಜೊತೆಗೆ ಸಮುದಾಯದ ವಿದ್ಯಾರ್ಥಿಗಳಿಗಾಗಿ ರಾಜ್ಯಾದ್ಯಂತ ವಸತಿ ನಿಲಯಗಳು ತರಬೇತಿ ಕೇಂದ್ರಗಳು ಯು ಪಿ ಎಸ್ ಸಿ ಮತ್ತು ಕೆ ಪಿ ಎಸ್ ಸಿ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆರೆಯುವುದು ಸಮುದಾಯಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಕರ್ನಾಟಕ ಮಾದರ ಮಹಾಸಭಾ ಮುಖ್ಯ ಉದ್ದೇಶ ಕೊಟ್ಟೂರು ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅತಿ ಹೆಚ್ಚು ಸದಸ್ಯತ್ವ ಅಭಿಯಾನ ನೋಂದಣಿಯನ್ನು ಮಾಡಿಸುವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಮುಖಂಡರು ಪುತ್ರೇಶ್ ಹಡಗಲಿ ಜಿಲ್ಲಾ ಉಪಾಧ್ಯಕ್ಷ ಎಚ್ ಪೂಜಪ್ಪ ಖಜಾಂಚಿ ದುರುಗೇಶ ಮಹಿಳಾ ಮುಖಂಡರು ವಿಶಾಲಾಕ್ಷಿ ರಾಜಣ್ಣ ಜಿಲ್ಲಾ ಸದಸ್ಯ ಬೇವೂರ್ ಕೊಟ್ರೇಶ್ ಅಕ್ಷಯ್ ಕುಮಾರ್ ಹಾಗೂ ಮಾದರ ಮಹಾಸಭಾ ಕೊಟ್ಟೂರು ತಾಲೂಕು ಅಧ್ಯಕ್ಷರು ಕನ್ನಾಕಟ್ಟಿ ಶಿವರಾಜ್ ಖಜಾಂಜಿ ರಾಂಪುರ ಶ್ರೀನಿವಾಸ್ ಕಾರ್ಯಕಾರಿ ಸಮಿತಿ ಸದಸ್ಯರು ಪೂಜಾರ್ ಅಜ್ಜಯ್ಯ ಗುಲಾಲಿ ದುರುಗೇಶ ಹಾಗೂ
ವಿಶೇಷ ಆಹ್ವಾನಿತರಾಗಿ ಹನುಮಂತ ಮಹೇಶ್ ಪರಸಪ್ಪ ರಾಜಣ್ಣ ಕೊಟ್ರೇಶ್ ಶಂಕ್ರಣ್ಣ ಸುರೇಶ್ ಮತ್ತಳ್ಳಿ ರಾಮಣ್ಣ ಇನ್ನು ಅನೇಕ ಯುವಕರು ಉಪಸ್ಥಿತರಿದ್ದರು.
ವರದಿ:ಕೆ. ಗೋಣೆಪ್ಪ




















