ಶಿರಸಿ: ಜಸ್ಟೀಸ್ ಜಿ.ಎನ್.ಸಭಾಹಿತ ಹಾಗೂ ಜಸ್ಟೀಸ್ ವಿಷ್ಣು ಸಭಾಹಿತ ಅವರ ಸ್ಮರಣೆ ಹಿನ್ನೆಲೆಯಲ್ಲಿ ಉಪನ್ಯಾಸ ಕಾರ್ಯಕ್ರಮ ನಗರದ ಹಾಲುಹೊಂಡ ಬಡಾವಣೆಯ ಗಾಯತ್ರಿ ಗೆಳೆಯರ ಬಳಗದಲ್ಲಿ ಇದೇ ಶನಿವಾರ ಅಗಸ್ಟ್ 22 ರ ಸಂಜೆ 4 ಘಂಟೆಗೆ ನಡೆಯಲಿದೆ.
ಭಜಿಸು ಭಗವಂತನ ಕುರಿತು ಶ್ರೀ ಶಿವಾನಂದ ಪಂಡಿತ್ ಗೋವಾ ಹಾಗೂ ಬಣ್ಣ ಬಣ್ಣದ ಆಹಾರ ಆರೋಗ್ಯಕ್ಕೆ ಆಧಾರ ಕುರಿತು ಡಾ. ಅನುಷಾ ಭಾಗವತ್ ಅವರಿಂದ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿದ್ದು ಎಲ್ಲರಿಗೂ ಆದರದ ಸ್ವಾಗತ.
- ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















