ಜನುಮದಿನದ ಕೇಕಿನ ಕಾಗದದ ವೃತ್ತವು
ನಡುವಲಿ ದಾಳಿಂಬೆ ಸಿಪ್ಪೆಯ ಪುಷ್ಪವು
ಹಲ್ಲುಜೋಳದ ಕಾಳುಗಳ ಅನಾವರಣವು
ಸುತ್ತಲೂ ಹರಡಿದೆ ಕವಚದೆಳೆಗಳ ಹರವು
ಮಾಡಲಾಗಿರುವ ಹಸಿರೆಲೆ ಗರಿಗಳ ಸಿಂಗಾರವು
ಜೊತೆಗೆ ಕಿತ್ತಳೆ ಸಿಪ್ಪೆಯ ತುಣುಕುಗಳ ತಿಲಕವು
ಸೃಜನಶೀಲ ಕಲ್ಪನೆಯಲಿ ಶುಭೋದಯದ ಚಿತ್ತಾರವು
ಓದುಗ ಸುಮನಗಳಿಗಿದುವೆ ಬಣ್ಣನೆಯ ಕಾವ್ಯವು.
- ಲಲಿತಾ ಕೆ ಆಚಾರ್ ಬೆಂಗಳೂರು



















