ಗಂಗಾವತಿ : ಆಗಸ್ಟ್ 15: ಭಾರತವು ಪ್ರತಿವರ್ಷ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಲಾಗುತ್ತದೆ. ಬ್ರಿಟಿಷರ 200 ವರ್ಷಗಳ ಆಡಳಿತದಿಂದ 1947ರ ಇದೇ ದಿನದಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಇಂದು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಿ ಪಡೆದ ಐತಿಹಾಸಿಕ ದಿನ ಎಂದು ಗಂಗಾವತಿಯ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ ಹೇಳಿದರು.
ನಗರದ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರದಂದು 80 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ದ್ವಜಾರೋಹಣ ಮಾಡಿ ಅವರು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ
ಮಹಾತ್ಮ ಗಾಂಧಿ, ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಮುಂತಾದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಸ್ಮರಣೆ. ದೇಶದ ಐಕ್ಯತೆ, ಸಮಗ್ರತೆ ಹಾಗೂ ದೇಶಪ್ರೇಮದ ಪ್ರತೀಕವಾಗಿದೆ. ಈ ದಿನ ಇಡೀ ದೇಶದಲ್ಲಿ ರಾಷ್ಟ್ರೀಯ ಹಬ್ಬವೆಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ವಿರೇಶ್ ಬಲಕುಂದಿ, ಸೋಮಶೇಖರ್ ಕಂಪ್ಲಿ,
ಕಾಲೇಜಿನ ಪ್ರಾಧ್ಯಾಕರಾದ ಡಾ. ಕೃಷ್ಣ, ಡಾ. ಉಮಾಕಾಂತ್ ಅವರೆಡ್ಡಿ, ಡಾ. ಅಣ್ಣೋಜಿ ರೆಡ್ಡಿ, ಡಾ. ಇಬ್ರಾಹೀಮ್, ಡಾ. ಮಂಜುನಾಥ್ ಹಾಗೂ ಇತರರು ಮಾತನಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ದೈಹಿಕ ಶಿಕ್ಷಣ ಭೋದಕರಾದ ಡಾ. ಅನಿಲ್ ಎಡವರ್ಡ್, ಶೋಭಾ ರಾಣಿ, ನಿರ್ವಹಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವ್ಯವಸ್ಥಾಪಕರಾದ ರಾಗಮ್ಮ, ಜ್ಯೋತಿ, ಪ್ರತಿಭಾ, ಕಾಲೇಜಿನ ಪ್ರಾಧ್ಯಪಕರಾದ ಡಾ. ಶಿಲ್ಪಾ ಕುಲಕರ್ಣಿ, ಡಾ. ಅನ್ನಪೂರ್ಣ ಗುಡದೂರ, ವಿಜಯಲಕ್ಷ್ಮಿ, ಪಣಿರಾಜ್, ರವಿ, ಅಶ್ರಫ್, ಸೂರಿಬಾಬು, ರವಿಕುಮಾರ್, ಅಂಜುಮ್, ಸಲೀಮ್, ಮಲ್ಲಿಕಾರ್ಜುನ, ಭೂಮಿಕಾ ಹಾಗೂ ಕಾಲೇಜಿನ ಇತರೆ ಭೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು ಮತ್ತು ಎನ್ ಸಿ ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ



















