ಬಾಗಲಕೋಟೆ ಜಿಲ್ಲೆಯ ಮುಧೋಳ :
ಜಾತಿ.ಮತ.ಪಂಥ.ಮೇಲು . ಕೀಳು ಎಂಬ ತಾರತಮ್ಯ ತೊಲಗಬೇಕು. ಸವ೯ರನ್ನೂ ಸಮಭಾವದಿಂದ ಕಾಣುವ ವಾತಾವರಣ ನಿರ್ಮಾಣವಾಗಬೇಕೆಂದು ಪರಮ.ಪೂಜ್ಯ.ಶರಣಬಸವ ಶಾಸ್ತ್ರಿಗಳು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಶ್ರಾವಣ ಸಂಭ್ರಮ -2026 ರ ತನ್ನಮಿತ್ಯ ಕಾಮಧೇನು ಕಲ್ಪಧೃಮ ಶ್ರೀ ಸಿದ್ಧಾರೂಢರ ಕಥಾಮೃತ, ಆಧ್ಯಾತ್ಮಿಕ ಚಿಂತನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರಾಗ, ದ್ವೇಷಗಳನ್ನು ಕಳೆದುಕೊಂಡು ಪ್ರೇಮದಿಂದ ಬದುಕುವುದೇ ಚಂದ ಎಂದರು.
ಹಿರಿಯರಾದ ಮಲ್ಲು ಮುಚ್ಚಂಡಿ ದೀಪ ಬೆಳಗಿಸಿದರು. ಮಹಾಲಿಂಗಯ್ಯ ಹಿರೇಮಠ ಸಾನಿಧ್ಯ ವಹಿಸಿದ್ದರು.
ಹಿರಿಯ ಜನಪದ ಕಲಾವಿದೆ ಶ್ರೀಮತಿ ಮುತ್ತವ್ವ ಲಕ್ಷ್ಮೇಶ್ವರ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಮಹಾಳಿಂಗೇಶ್ವರ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಸಮ್ಮುಖದಲ್ಲಿ ಧಾರ್ಮಿಕ-ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.
ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್ ಶ್ಯಾಮಲಾ ಸ್ವಾಗತಿಸಿ, ವಂದಿಸಿದರು.



















