ಪುಟ್ಟರೆಕ್ಕೆ ತುಂಬೆಗಳ ನಡುವೆ ದಾಸವಾಳದ ಬೊಟ್ಟು
ಸುತ್ತ ಆವರಿಸಿದೆ ಕಲ್ಲಂಗಡಿ ಹಣ್ಣಿನ ಸಿಪ್ಪೆಗಳ ಪಟ್ಟು
ಅಡಿಗೆ ಅರ್ಧಚಂದ್ರಾಕಾರದಿ ಕೆಂಪು ಹೂಗಳನಿಟ್ಟು
ಮುಡಿಯಲಿ ನಳ ನಳಿಸಿದೆ ಸಂಜೆ ಮಲ್ಲಿಗೆಯ ಕಟ್ಟು
ನಡು ನಡುವಲಿವೆ ಹಲ್ಲುಜೋಳದ ಅರಳುಗಳು
ಬಳುಕುತಿವೆ ವೈಯ್ಯಾರದಲಿ ತಿಳಿಹಸಿರ ತೆನೆಗಳು
ಕ್ರಿಯಾಶೀಲತೆಯಲಿ ಅರಳಿತು ಸುಲಲಿತ ಚಿತ್ತಾರವು
ಓದುಗರಿಗೆ ಉಗಮಿಸಿತು ಕಾವ್ಯದಾ ಆಹಾಕಾರವು
- ಲಲಿತಾ ಕೆ ಆಚಾರ್, ಬೆಂಗಳೂರು



















