ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಜನುಮದಿನವನ್ನು ಸರಳವಾಗಿ ಆಚರಣೆ ಮಾಡಿದ ಜೆಡಿಎಸ್ ಅಭಿಮಾನಿಗಳು.

ಕೊರಟಗೆರೆ: ಕಾರ್ಯಕರ್ತರ ಅಭಿಮಾನಕ್ಕೆ ನಾನು ಚಿರಋಣಿ, ಯಾವುದೇ ಕಾರಣಕ್ಕೂ ಕ್ಷೇತ್ರವನ್ನು ಬಿಟ್ಟು ಹೊರಗೆ ಹೋಗುವುದಿಲ್ಲ ಎಂದು ಮಾಜಿ ಶಾಸಕ ಪಿ.ಆರ್. ಸುಧಾಕರ್ ಲಾಲ್ ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಯೋಜಿಸಿದ್ದ ತಮ್ಮ 58ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡ ಅವರು, ಪಟ್ಟಣದ ಕಟ್ಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಭಿಮಾನಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 25 ಕೆ.ಜಿ. ತೂಕದ ಕೇಕ್ ಕತ್ತರಿಸಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಂಭ್ರಮಕ್ಕೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಪತ್ರಕರ್ತರು, ‘ಮಾಜಿ ಶಾಸಕರು ಕ್ಷೇತ್ರವನ್ನು ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಧಾಕರ್ ಲಾಲ್, ‘ಇಂದು ನನ್ನ ಹುಟ್ಟುಹಬ್ಬ. ಈ ದಿನ ಈ ಮಾತು ಬೇಡ. ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೊರಗೆ ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಎಲ್ಲವನ್ನೂ ತಿಳಿಸುತ್ತೇನೆ’ ಎಂದು ಹೇಳಿದರು.
ಮಾಜಿ ಶಾಸಕರ ಈ ಹೇಳಿಕೆಗೆ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿ ಸಂಭ್ರಮಿಸಿದರು.

ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಹಾಗೂ ಕಾರ್ಯಕರ್ತರ ವತಿಯಿಂದ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು. ಸಾರ್ವಜನಿಕರಿಗೆ ಸಿಹಿ ಹಾಗೂ ತಿಂಡಿ ವಿತರಿಸಿ, ನೆಚ್ಚಿನ ನಾಯಕನಿಗೆ ಹೂಮಾಲೆ ಹಾಕಿ ಶುಭಾಶಯ ಕೋರಲಾಯಿತು.
ಪಟ್ಟಣದ ಎಸ್‌ಎಸ್‌ಆರ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ನೋಟಿನ ಹಾರ: ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಮಾನಿಯೊಬ್ಬರು ತಮ್ಮ ನೆಚ್ಚಿನ ನಾಯಕನಿಗೆ ನೋಟುಗಳಿಂದ ತಯಾರಿಸಿದ ವಿಶೇಷ ಹಾರ ಹಾಕಿ ಶುಭ ಹಾರೈಸಿದ್ದು ಗಮನ ಸೆಳೆಯಿತು.
ನೋಟಿನ ಹಾರ ಹಾಕಿ ಸನ್ಮಾನಿಸಿದ ಅಭಿಮಾನಿ, ಬಳಿಕ ಕೇಕ್ ಕತ್ತರಿಸುವ ಕಾರ್ಯಕ್ರಮದಲ್ಲೂ ಪಾಲ್ಗೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ಮಾತನಾಡಿ, ‘ಮಾಜಿ ಶಾಸಕ ಸುಧಾಕರ್ ಲಾಲ್ ಅವರು ಕ್ಷೇತ್ರದ ಜನರೊಂದಿಗೆ ಸದಾ ಇದ್ದಾರೆ. ಅಧಿಕಾರದಲ್ಲಿದ್ದಾಗಲೂ, ಇಲ್ಲದಿದ್ದಾಗಲೂ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅನೇಕ ಬಡವರಿಗೆ ವೈಯಕ್ತಿಕವಾಗಿ ನೆರವಾಗಿ, ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರಕಿಸಲು ಸಹಕರಿಸಿದ್ದಾರೆ. ಜನರ ಕುಟುಂಬದ ಕಾರ್ಯಕ್ರಮಗಳಿಗೂ ಮನೆಮಗಳಂತೆ ಸ್ಪಂದಿಸುತ್ತಾರೆ’ ಎಂದರು.

ಜೆಡಿಎಸ್ ಮುಖಂಡ ರಮೇಶ್ ಮಾತನಾಡಿ, ‘ಸುಧಾಕರ್ ಲಾಲ್ ಅವರ ಜನಪರ ಸೇವೆ ಹಾಗೂ ಕಾರ್ಯಕರ್ತರೊಂದಿಗೆ ಇರುವ ಆತ್ಮೀಯತೆ ಅವರ ದೊಡ್ಡ ಶಕ್ತಿ. ಜನರ ಪ್ರೀತಿ ಮತ್ತು ವಿಶ್ವಾಸ ಅವರೊಂದಿಗೆ ಇದೆ’ ಎಂದು ಹೇಳಿದರು.

ಜೆಡಿಎಸ್ ಮುಖಂಡ ಶಶಿ ಮಾತನಾಡಿ, ‘ಸಾಮಾನ್ಯ ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ನಾಯಕ ಸುಧಾಕರ್ ಲಾಲ್ ಅವರ ಮೇಲಿನ ಕಾರ್ಯಕರ್ತರ ನಂಬಿಕೆ ಮತ್ತಷ್ಟು ಗಟ್ಟಿಯಾಗಿದೆ’ ಎಂದರು.

ಜೆಡಿಎಸ್ ಮುಖಂಡ ಲಂಬು ರಾಜಣ್ಣ ಮಾತನಾಡಿ, ‘ಕ್ಷೇತ್ರದ ಜನರೊಂದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿರುವ ಸುಧಾಕರ್ ಲಾಲ್ ಅವರ ನಾಯಕತ್ವಕ್ಕೆ ಜನರ ಬೆಂಬಲವಿದೆ’ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ಮಾತನಾಡಿ, ‘ಯಾವುದೇ ಕಾರಣಕ್ಕೂ ಕ್ಷೇತ್ರ ಬಿಟ್ಟು ಹೋಗುವುದಿಲ್ಲ ಎಂಬ ನಾಯಕನ ಹೇಳಿಕೆ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಮುಂದಿನ ದಿನಗಳಲ್ಲಿ ಅವರ ನೇತೃತ್ವದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ಸ್ನೇಹಜೀವಿ ಪಿ ಆರ್ ಸುಧಾಕರ್ ಲಾಲ್ ಅಭಿಮಾನಿ ಬಳಗದ
ಹನುಮಂತಣ್ಣ, ದೇವರಾಜು, ರಮೇಶ ಬೈರಸಂದ್ರ, ನಾಗರಾಜು ಸೀಗೇಪಾಳ್ಯ, ಪ್ರಕಾಶ್, ಬಸವರಾಜು.H.V, ಮಂಜಣ್ಣ, ನವೀನಕುಮಾರ್, ಸಂತೋಷ, ಕಾಂತರಾಜು, ಸತೀಶ್, ಶಿವರಾಮು
ಸಾಕರಾಜ್, ಲಕ್ಷಣ್, ಶ್ರೀಧರ್.H.R ವೆಂಕಟೇಶ K.N.ಹೇಮಂತ್
ದೀಪು.ಜಗಣ್ಣ.
ನರಸಿಂಹರಾಜು
ಗೋವಿಂದರಾಜು
ರಾಜು ಬುಕ್ಕಾಪಟ್ಟಣ
ಕಾಂತರಾಜು.ಥರಟಿ
ಪುಟ್ಟ ನರಸಪ್ಪ , ಸುಬ್ರಹ್ಮಣ್ಯ, ಆನಂದ್ ಕುಮಾರ್, ಪ್ರಸನ್ನ ಕುಮಾರ್, ಗೋವಿಂದರಾಜು,
ಅಯತಣ್ಣ, ನಾಗೇಂದ್ರಣ್ಣ
ಕಲೀಮ್ ಪಾರುಕ್, ಕೌಶಿಕ್
ಹನುಮಂತರಾಜು, ರೇಣುಕಾ,
ಸಿದ್ದರಾಜು (ಪ್ರಚಾರ ಸಮಿತಿ ಅಧ್ಯಕ್ಷರು),
ಪಾಂಡು ವರ್ಧನ್ ಸೇರಿದಂತೆ
ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಪಾಲ್ಗೊಂಡು ನೆಚ್ಚಿನ ನಾಯಕನಿಗೆ ಶುಭ ಹಾರೈಸಿದರು.

ವರದಿ ಪ್ರಸನ್ನ ಕುಮಾರ್. ಎಸ್. ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!