ಬಳ್ಳಾರಿ / ಕಂಪ್ಲಿ : ತಾಲೂಕಿನ ಕಣ್ವಿತಿಮ್ಮಲಾಪುರ ಗ್ರಾಮದ ಜಗದೀಶ್ ಪೂಜಾರ್ ಇವರು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಸಮಾಜ ಮುಖಿ ಕಾರ್ಯಗಳಾದ ಗ್ರಾಮೀಣ ಕ್ರೀಡಾ ಕೂಟ, ಸ್ವಚ್ಚತಾ ಅಭಿಯಾನ, ಸಹಾಸ ಕ್ರೀಡೆಗಳು, ಪಲ್ಸ್ ಪೋಲಿಯೊ, ಆರೋಗ್ಯ ಜಾಗೃತಿ ಬೀದಿ ನಾಟಕ, ರಕ್ತದಾನ ಶಿಬಿರ, ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸುವುದು ಇನ್ನೂ ಅನೇಕ ಕಾರ್ಯಗಳನ್ನು ಗುರುತಿಸಿ ಇವರ ಅನುಪಮ ಸೇವೆಗಾಗಿ ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ.) ಬೆಂಗಳೂರು ಇವರು 23ನೇ ಆಗಸ್ಟ್ ಭಾನುವಾರದಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಭಾರತ ಭೂಷಣ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದು ಚಾರಿಟಬಲ್ ಟ್ರಸ್ಟ್ ನ ರಾಜ್ಯಾಧ್ಯಕ್ಷರಾದ ಅಲೈ ರೊ.ಡಾ.ಜಿ ಶಿವಣ್ಣ ಇವರು ತಿಳಿಸಿದ್ದಾರೆ.
ಇವರಿಗೆ ಸಂದ ಪ್ರಶಸ್ತಿಗಳು :
ರಾಜ್ಯ ಸದ್ಭಾವನ ಪ್ರಶಸ್ತಿ
ಬಸವಶ್ರೀ ರಾಷ್ಟ್ರೀಯ ಪ್ರಶಸ್ತಿ
ಸಮಾಜ ಸೇವಾ ಭಾರ್ಗವ ಪ್ರಶಸ್ತಿ
ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಣ್ವಿತಿಮ್ಮಲಾಪುರ ಗ್ರಾಮದಲ್ಲಿ ಅತಿಥಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















