ಶಿವಮೊಗ್ಗ : ನಗರದ ಗೋಪಾಲದಲ್ಲಿರುವ ಬ್ರಾಹ್ಮಣ ಸೇವಾ ಸಂಘ ಇದರ ವತಿಯಿಂದ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭ ಏರ್ಪಡಿಸಿದ್ದು ದಿನಾಂಕ 23.08.2026ರ ಭಾನುವಾರ ಬೆಳಿಗ್ಗೆ 11.30ಕ್ಕೆ ಸುರಭಿ ಸಮುದಾಯ ಭವನ್, ಚಾಲುಕ್ಯನಾಗರ ,ಶಿವಮೊಗ್ಗ ಇಲ್ಲಿ ಸಂಘದ ಅಧ್ಯಕ್ಷ ಶ್ರೀ ಸುರೇಶ ಉಮರಾಣಿ ಇವರ ಅಧ್ಯಕ್ಷತೆಯಲ್ಲಿ ಜರುಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಶಾಸಕ ಶ್ರೀ ಎಸ್ ಚನ್ನಬಸಪ್ಪ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದು ಶ್ರೀ ಎಚ್ ಎಸ್ ಶ್ರೀನಿವಾಸ ಮೂರ್ತಿ, ಗೌರವ ಅಧ್ಯಕ್ಷರು, ಬ್ರಾಹ್ಮಣ ಸೇವಾ ಸಂಘ ಇವರ ಘನ ಉಪಸ್ಥಿತಿ ಇದ್ದು ಇದೇ ಸಂಧರ್ಭದಲ್ಲಿ ಎಸ್ .ಎಸ್ .ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಪ್ರಸಮುದಾಯದವರಿಗೆ ಅಭಿನಂದನಾ ಸಮಾರಂಭವು ಜರುಗುವುದು.
ಈ ಸಂದರ್ಭದಲ್ಲಿ ಶ್ರೀ ಎಸ್ ಜಿ ಗೋಪಾಲ್ , ಖ್ಯಾತ ಲೆಕ್ಕ ಪರಿಶೋಧಕರು, ಶ್ರೀ ನಾಗರಾಜ ಎಸ್ ಎನ್ , ಶಿಕ್ಷಣ ತಜ್ಞರು, ವಿ.ಜಿ.ಲಕ್ಷೀನಾರಾಯಣ ಜೋಯಿಸ್, ಉದ್ಯಮಿಗಳು, ಶ್ರೀ ಎ ಶಿವರಾಮ ಭಟ್ಟ ,ಉದ್ಯಮಿಗಳು ಮತ್ತು ಶ್ರೀ ನವ್ಯಶ್ರೀ ನಾಗೇಶ್, ಪರಿಸರ ಜಾಗೃತಿ ಇವರುಗಳನ್ನು ಅಭಿನಂದಿಸಲಾಗುವುದು ಎಂದು ವರದಿ ತಿಳಿಸಿದೆ.
ಬ್ರಾಹ್ಮಣ ಸೇವಾ ಸಂಘದ ಸರ್ವ ಸದಸ್ಯರ ಸಭೆಯು ಇದೇ ದಿವಸ , ಇದೇ ಸ್ಥಳದಲ್ಲಿ ಬೆಳಿಗ್ಗೆ 10ಕ್ಕೆ ಸಂಘದ ಅಧ್ಯಕ್ಷ ಶ್ರೀ ಉಮರಾಣಿ ಅವರ ಅಧ್ಯಕ್ಷತೆಯಲ್ಲಿ ಜರುಗುವುದು ಎಂದು ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎ ಎನ್ ಶ್ರೀಧರಮೂರ್ತಿ ಅವರು ಪ್ರಕಟಿಸಿದ್ದಾರೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.




















