ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಲಿಜ ಸಮಾಜದಿಂದ ಶ್ರೀ ಯೋಗಿ ನಾರಾಯಣ ಯತೇಂದ್ರರ ಭವ್ಯ ಮೆರವಣಿಗೆ; ವಿಶೇಷ ಧಾರ್ಮಿಕ ಕಾರ್ಯಕ್ರಮ ಸಂಪನ್ನ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಶನಿವಾರ ಬಲಿಜ ಸಮಾಜದ ಬಾಂಧವರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮವು ಅತ್ಯಂತ ಭಕ್ತಿ-ಭಾವ ಮತ್ತು ಸಡಗರದಿಂದ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಐತಿಹಾಸಿಕ ಕೋಟೆ ಭಾಗದ ತುಂಗಭದ್ರಾ ನದಿಯ ದಂಡೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಲ್ಲಿಂದ ಶ್ರೀ ಯೋಗಿ ನಾರಾಯಣ ಯತೇಂದ್ರರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ನದಿಯ ದಂಡೆಯಲ್ಲಿ ಪೂಜೆ ನೆರವೇರಿದ ಬಳಿಕ, ಶ್ರೀಗಳ ಭಾವಚಿತ್ರದೊಂದಿಗೆ ಪವಿತ್ರ ಗಂಗಸ್ಥಳವನ್ನು ಭಕ್ತಿಪೂರ್ವಕವಾಗಿ ಹೊತ್ತು ಮೆರವಣಿಗೆ ನಡೆಸಲಾಯಿತು.
ಈ ಭವ್ಯ ಮೆರವಣಿಗೆಯು ಕಂಪ್ಲಿಯ ಮುಖ್ಯ ಬಜಾರ್ (ಮೇನ್ ಬಜಾರ್) ರಸ್ತೆಯ ಮೂಲಕ ಸಾಗಿ ಮಾರುತಿನಗರದ ಬಲಿಜ ಭವನದಲ್ಲಿ ಸಂಪನ್ನಗೊಂಡಿದೆ.
ಮೆರವಣಿಗೆ ಯುದ್ದಕ್ಕೂ ಜಯಘೋಷಗಳು ಮೊಳಗಿದವು. ಬಲಿಜ ಸಮಾಜದ ಪ್ರಮುಖರು, ಮಹಿಳೆಯರು ಹಾಗೂ ಯುವಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಅಂತಿಮವಾಗಿ ಮಾರುತಿನಗರದ ಶಿಬ್ರದಿನ್ನಿಯಲ್ಲಿರುವ ಬಲಿಜ ಭವನದ ಆವರಣಕ್ಕೆ ಗಂಗಾಸ್ಥಳವನ್ನು ತರಲಾಯಿತು. ಅಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನ ಹಾಗೂ ಪೂಜಾ ಕಾರ್ಯಕ್ರಮಗಳೊಂದಿಗೆ ಇಡೀ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಳಿಸಲಾಯಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!