ಹುಬ್ಬಳ್ಳಿ : ಭವಾನಿ ನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಜಯೀಂದ್ರ ಸಭಾ ಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಸಪ್ತರ್ಷಿ ಫೌಂಡೇಶನ್ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ–2026 ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಚಿವ ಶ್ರೀ ಪ್ರಹ್ಲಾದ ಜೋಷಿ ಅವರು ಭಾಗವಹಿಸಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಪ್ರತಿಭೆ, ಪರಿಶ್ರಮ ಮತ್ತು ಸಾಧನೆಗೆ ಪ್ರೋತ್ಸಾಹ ನೀಡಿ ಯುವ ಪ್ರತಿಭೆಗಳನ್ನು ಗುರುತಿಸಿ, ಗೌರವಿಸಿ, ಅವರಲ್ಲಿ ಮತ್ತಷ್ಟು ಸಾಧಿಸುವ ಸ್ಫೂರ್ತಿ ತುಂಬುವ ಇಂತಹ ಕಾರ್ಯಕ್ರಮಗಳು ನಿಜಕ್ಕೂ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು .
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಎಸ್. ರಘುನಾಥ್, ಉದ್ಯಮಿಗಳಾದ ಶ್ರೀ ಹೆಚ್.ಎನ್. ನಂದಕುಮಾರ್, ಶ್ರೀ ಗೋವಿಂದ್ ಜೋಶಿ, ಡಾ. ಎನ್.ಎಸ್. ರವೀಶ್, ಡಾ. ಹನುಮಂತ ಡಂಬಳ, ಶ್ರೀ ಲಕ್ಷ್ಮಿಕಾಂತ, ಶ್ರೀ ದತ್ತಮೂರ್ತಿ ಕುಲಕರ್ಣಿ, ಶ್ರೀ ಲಕ್ಷ್ಮಣ್ ಕುಲಕರ್ಣಿ, ಶ್ರೀ ದತ್ತಾತ್ರೇಯ, ಶ್ರೀ ಪ್ರಕಾಶ, ಶ್ರೀ ಸುಬ್ಬಣ್ಣ, ಶ್ರೀ ಸಂಜೀವ ಜೋಶಿ, ಶ್ರೀ ಹುಲಿ ರಾಜಾಚಾರ್ಯರು ಸೇರಿದಂತೆ ಗಣ್ಯರು, ಸಮಾಜದ ಪ್ರಮುಖರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು




















