
ಬಳ್ಳಾರಿ / ಕಂಪ್ಲಿ : ಪಟ್ಟಣದ 10ನೇ ವಾರ್ಡಿನ ಸಂತೆ ಮಾರುಕಟ್ಟೆ ಬಳಿಯಲ್ಲಿರುವ ಶ್ರೀ ಕೋಟಾಳ ಮಾರೆಮ್ಮ ದೇವಿಯ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಗೋಪುರ ಕಳಸಾರೋಹಣ ಹಿನ್ನಲೆ ಮೂರ್ತಿ ಪುರ ಪ್ರವೇಶದ ಭವ್ಯ ಮೆರವಣಿಗೆ ಪಟ್ಟಣದಲ್ಲಿ ಅತ್ಯಂತ ಸಂಭ್ರಮ ಸಡಗರಿಂದ ಮಂಗಳವಾರ ನಡೆಯಿತು.
ಬುಕ್ಕಸಾಗರದ ಶಿಲ್ಪಿಗಾರ ವಿಶ್ವನಾಥ ಆಚಾರ್ಯ ಅವರು ದೇವಿಯ ಮೂರ್ತಿ ಕೆತ್ತನೆ ಮಾಡಿದ್ದಾರೆ. ಇಂದಿನ ಶುಭ ಗಳಿಯಲ್ಲಿ ಬುಕ್ಕಸಾಗರದಿಂದ ಬಂದಂತಹ ದೇವಿಯ ಮೂರ್ತಿಯನ್ನು ಕಂಪ್ಲಿ ಪಟ್ಟಣದ ಹೊಸ ಬಸ್ ನಿಲ್ದಾಣ ಬಳಿಯಿಂದ ಪುರ ಪ್ರವೇಶದ ಭವ್ಯ ಮೆರವಣಿಗೆ ಆರಂಭಿಸಿ, ಉದ್ಭವ ಗಣೇಶ್ ದೇವಸ್ಥಾನ, ನಡುವಲ ಮಸೀದಿ, ಡಾ.ರಾಜಕುಮಾರ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಸರ್ಕಾರಿ ಆಸ್ಪತ್ರೆ ಮೂಲಕ ಸಂತೆ ಮಾರುಕಟ್ಟೆ ಬಳಿಯ ದೇವಸ್ಥಾನದಲ್ಲಿ ಸಮಾವೇಶಗೊಂಡಿತು. ಈ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಾಷಾರಾಂಡೋಲ್, ಮಂಗಳವಾದ್ಯ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯಗುರು ಈಶ್ವರಪ್ಪ, ಮುಖಂಡರಾದ ಮಾನ್ವಿ ರಾಮಚಂದ್ರ, ಮಾನ್ವಿ ಮಹೇಶ, ಮೌಲಾ, ಷಣ್ಮುಖ, ಗೊಗ್ಗರಸ್ವಾಮಿ, ರಾಘವೇಂದ್ರ, ಉಮೇಶ, ಈರಣ್ಣ ಸೇರಿದಂತೆ ಸ್ಥಳೀಯ ಹಾಗೂ ಸುತ್ತಮುತ್ತಲಿನ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















