ಬಳ್ಳಾರಿ / ಕಂಪ್ಲಿ: ಪಟ್ಟಣದ 12ನೇ ವಾರ್ಡಿನ ಶಿಕಾರಿ ಕಾಲೋನಿಯ ಹಕ್ಕಿಪಿಕ್ಕಿ (ಪರ‍್ದಿ) ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಪಿ.ಶ್ರೀಕಾಂತ (60) ಹೃದಯಾಘಾತದಿಂದ ಮಂಗಳವಾರ ಬೆಳಗಿನ ಜಾವ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಬುಧವಾರ ಜರುಗಲಿದೆ.
ಹಕ್ಕಿಪಿಕ್ಕಿ ಸಮಾಜದ ಗೌರವಾಧ್ಯಕ್ಷ ಹೆಚ್.ಪಿ.ಶಿಕಾರಿರಾಮು ಸೇರಿದಂತೆ ಸಮುದಾಯದವರು ಸಂತಾಪ ಸೂಚಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















