
ಕೊರಟಗೆರೆ : ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಮಣ್ಣಿನ ಸಂರಕ್ಷಣೆ ಅರಣ್ಯೀಕರಣ ಹಾಗೂ ಕೆರೆ ಸಂರಕ್ಷಣೆ ಬಹು ಮುಖ್ಯವಾಗಿದೆ ಕೊರಟಗೆರೆ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ನರಸಿಂಹ ಮೂರ್ತಿ ರವರು ಅಭಿಪ್ರಾಯಪಟ್ಟರು.
ಅಸರ್ ಹಾಗೂ ಗ್ರಾಮ ವಿಕಾಸ ಸಂಸ್ಥೆಯ ಮಾರ್ಗದರ್ಶನದಲ್ಲಿ ಹವಾಮಾನ ಕ್ರಿಯಾ ಆಂದೋಲನ ಕರ್ನಾಟಕದ ವತಿಯಿಂದ ರಚಿಸಲಾಗಿರುವ ಕಲ್ಪತರು ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟ ದ ವತಿಯಿಂದ ಹೊಳವನಹಳ್ಳಿ ಯಲ್ಲಿ ಆಯೋಜಿಸಲಾಗಿದ್ದ ಹವಾಮಾನ ಕ್ರಿಯೆಯಲ್ಲಿ ಮಣ್ಣು ಸಂರಕ್ಷಣೆ ಕುರಿತ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಕೃಷಿಯ ಜೀವಾಳವಾದ ಮಣ್ಣು ಮುಂದಿನ ಪೀಳಿಗೆಗೂ ಅಗತ್ಯವಿದೆ. ಮಣ್ಣಿನ ಸಂರಕ್ಷಣೆ ಕೃಷಿಯ ಉಳಿವಿಗೆ ಅತ್ಯಗತ್ಯವಾಗಿದೆ ಎಂದು ತಿಳಿಸುತ್ತಾ ನಮ್ಮ ಮುಂದಿನ ಪೀಳಿಗೆಗಾಗಿ ನಮ್ಮ ಹಳ್ಳಿಗಳನ್ನು ಉಳಿಸಲು ಮುಂದಾಗಬೇಕು ಈ ನಿಟ್ಟಿನಲ್ಲಿ ನಮ್ಮ ರೋಟರಿ ಕ್ಲಬ್ ಕಲ್ಪತರು ಹವಾಮಾನ ಕ್ರಿಯಾ ಸಮಿತಿಯ ಒಕ್ಕೂಟ ದೊಂದಿಗೆ ಕೈ ಜೋಡಿಸಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹವಾಮಾನ ಕ್ರಿಯಾ ಆಂದೋಲನ ಕರ್ನಾಟಕದ ರಾಜ್ಯ ಸಂಯೋಜಕ ರಾಜಾ ಹುಣಸೂರು ಅಸರ್ ಮತ್ತು ಗ್ರಾಮ ವಿಕಾಸ ಸಂಸ್ಥೆಯ ಆಯೋಗದಲ್ಲಿ ರಾಜ್ಯದ ಐದು ಜಿಲ್ಲೆಗಳಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹಳ್ಳಿಯನ್ನು ಉಳಿಸೋಣ ಅಭಿಯಾನವನ್ನು ಹವಾಮಾನ ಕ್ರಿಯಾ ಸಮಿತಿಗಳ ಮೂಲಕ ನಡೆಸಲಾಗುತ್ತಿದೆ. ನೆಲ ಜಲ ಅರಣ್ಯ ಜೀವಸಂಪತ್ತು ಹಾಗೂ ಗ್ರಾಮೀಣ ಜೀವನೋಪಾಯ ಚಟುವಟಿಕೆಗಳನ್ನು ಸಂಘಟಿತವಾಗಿ ಕಾಪಾಡಿಕೊಳ್ಳಲು ಕೊರಟಗೆರೆ ತಾಲೂಕು ಮಟ್ಟದ ಕಲ್ಪತರು ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟವನ್ನು ರಚಿಸಿ ಹವಾಮಾನ ಕ್ರಿಯಾ ಚಟುವಟಿಕೆಗಳಾದ ಭಯೋಚಾರ್ ತಯಾರಿಕೆ, ಮರ ಗಿಡಗಳ ನಡೆಸುವುದು, ಸಾವಯವ ಕೃಷಿಕರ ಸಂಘಟನೆ, ಸ್ಥಳೀಯ ತಳಿಯ ಜಾನುವಾರುಗಳನ್ನು ಉಳಿಸುವುದು ಬೀಜ ಬ್ಯಾಂಕ್ ಗಳ ಸ್ಥಾಪನೆ ಸೇರಿದಂತೆ ಕೃಷಿ ಆಧಾರಿತ ಉದ್ಯಮಗಳ ಉತ್ತೇಜನಕ್ಕೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಂಯೋಜಕರಾದ ಲೋಕೇಶ್ಎಂ ರವರು ಮಾತನಾಡಿ ಮಣ್ಣಿನ ಆರೋಗ್ಯ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುತ್ತಿರುವ ತೊಂದರೆಗಳು, ಸಮಗ್ರ ಹಾಗೂ ಸಾವಯವ ಕೃಷಿ ಸಾವಯವ ಇಂಗಾಲದ ಕುರಿತಾದ ಸುದೀರ್ಘವಾದ ಉಪನ್ಯಾಸ ನೀಡಿದರು.
ಕೃಷಿ ಇಲಾಖೆಯ ಹೊಳವನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು, ಸುನೀತಾರವರು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆಂಪೇಗೌಡ ರವರು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ದತ್ತ ರವರು ಇಲಾಖಾ ಕಾರ್ಯಕ್ರಮಗಳ ಕುರಿತು ಸವಿವರವಾದ ಮಾಹಿತಿಯನ್ನು ನೀಡಿದರು. ಬಿದಲೂಟಿ ಗ್ರಾಮದ ಹವಾಮಾನ ಕ್ರಿಯಾ ಸಮಿತಿಯ ಅಧ್ಯಕ್ಷ ಚನ್ನವೀರ ಆರಾಧ್ಯರವರು ಅಧ್ಯಕ್ಷತೆ ವಹಿಸಿದ್ದರು.
ಹವಾಮಾನ ಕ್ರಿಯಾ ಆಂದೋಲನದ ತುಮಕೂರು ಜಿಲ್ಲಾ ಸಂಯೋಜಕರಾದ ರವಿಕುಮಾರ್ ಕೆ ಎನ್ ರವರು ಕೊರಟಗೆರೆ ತಾಲೂಕು ಹವಾಮಾನ ಕ್ರಿಯಾ ಸಮಿತಿಯ ಪದಾಧಿಕಾರಿಗಳು, ಕೊರಟಗೆರೆ ತಾಲೂಕಿನ ಮಣ್ಣು ಸಂರಕ್ಷಕರುಗಳಾದ ಶಿಲ್ಪಾ, ಲಕ್ಷ್ಮಿ, ಜಾನಕಮ್ಮ, ಅಲುವೇಲಮ್ಮ, ಮಂಜುಳಾ, ಶಾಂತಮ್ಮ, ರಾಮಕ್ಕ, ಜಯಲಕ್ಷ್ಮಿ, ಚಿಕ್ಕಮ್ಮಣ್ಣಿ ರವರು ಹಾಗೂ ಪ್ರಗತಿಪರ ರೈತರಾದ ಚಂದ್ರಶೇಖರ, ಬಾಲಸುಬ್ರಹ್ಮಣ್ಯ, ತಿಮ್ಮರೆಡ್ಡಿ ಮತ್ತು ರೈತ ಸಂಘದ ಅಧ್ಯಕ್ಷರಾದ ಕೆಂಪರಾಜು , ಹಾಗೂ ಸದಸ್ಯರು ಹಾಗೂ ಪತ್ರಕರ್ತರದ ಪ್ರಸನ್ನ ಕುಮಾರ್ . ಎಸ್.ರವರು ಹಾಗೂ ನಿವೃತ್ತ ಬ್ಯಾಂಕ್ ನ ಅಧಿಕಾರಿಯದಂತಹ ನಾಗರಾಜುರವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ 100 ಕ್ಕೂ ಹೆಚ್ಚಿನ ಕ್ರಿಯಾ ಸಮಿತಿಯ ಸದಸ್ಯರುಗಳಾದ ರೈತರು ಯುವಕರು ಹಾಗೂ ಮಹಿಳೆಯರು ಭಾಗವಹಿಸಿದರು.
ವರದಿ ಪ್ರಸನ್ನ ಕುಮಾರ್. ಎಸ್ . ಕೊರಟಗೆರೆ




















