ಬಸವಕಲ್ಯಾಣ: ೧೨ನೇ ಶತಮಾನದಲ್ಲಿ ಶಿವಶರಣರಲ್ಲಿ ಒಬ್ಬರಾದ ಹಾವಿನ ಹಾಳ ಕಲ್ಲಯ್ಯನಿಗೆ ಗವಿಮಠದ ಪಟ್ಟದೇವರಾದ ಗುರು ರುದ್ರಮುನಿ ಶಿವಾಚಾರ್ಯರು ಜಗದ್ಗುರು ರೇವಣಸಿದ್ದೇಶ್ವರ ಅಪ್ಪಣೆಯಂತೆ ಶಿವ ದೀಕ್ಷೆಯನ್ನು ನೀಡಿದರು.
ವಚನ ಪಿತಾಮಹ ಹಾಗೂ ಫ.ಗು. ಹಳಕಟ್ಟಿ ಅವರು ಶಿವಾನುಭವ ಲೇಖನದಲ್ಲಿ ಪ್ರಸ್ತಾಪಿಸಿರುವಂತೆ ಜಗಜ್ಯೋತಿ ಬಸವೇಶ್ವರರು ಒಂದು ಬಲಿಷ್ಠ ರಾಜ್ಯದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದ ನಂತರ ಅನೇಕ ಶಿವಶರಣರು ಕಲ್ಯಾಣಕ್ಕೆ ಆಗಮಿಸತೊಡಗಿದರು ಬಳಿಕ ಎಲ್ಲರೂ ಒಟ್ಟಾಗಿ ಸೇರಿದ ನಂತರ ಶಿವಾನುಭವ ಮಂಟಪವು ಸ್ಥಾಪಿತವಾಯಿತು ಅಲ್ಲೇ ಶಿವಶರಣರು ಸೇರಿ ಧಾರ್ಮಿಕ ತತ್ವಗಳನ್ನು ಚರ್ಚಿಸುತ್ತಾ ವೀರಶೈವ ಧರ್ಮದಲ್ಲಿ ಒಂದು ಸುವ್ಯವಸ್ಥೆಯನ್ನು ಮಾಡಲಾಯಿತು ಎಂದು ಉಲ್ಲೇಖಿಸಲಾಗಿದೆ. ಶಿವಶರಣರಿಗೂ ಬಿಜ್ಜಳನಿಗೂ ವಿರೋಧ ಉಂಟಾದಾಗ ಶಿವಶರಣರು ಕಲ್ಯಾಣ ಪಟ್ಟಣವನ್ನು ಬಿಟ್ಟು ಉಳವಿ, ಶ್ರೀಶೈಲ ಮೊದಲಾದ ಕಡೆಗೆ ತೆರಳಿದರು ಈ ಸ್ಥಿತಿಯನ್ನು ಶ್ರೀ ಚೆನ್ನಬಸವಣ್ಣ, ಮಡಿವಾಳ ಮಾಚಿದೇವ, ಶರಣ ಕಿನ್ನರಿ ಬ್ರಹ್ಮಯ್ಯ, ಮುಂತಾದವರು ಕಲ್ಯಾಣದಲ್ಲಿಯೇ ಉಳಿಯುವ ಪ್ರಸಂಗ ಬಂದಿತು ಇಂತಹ ಸನ್ನಿವೇಶದಲ್ಲಿ ಗುರು ರುದ್ರಮುನಿಯು ಶಿವಶರಣರಿಗೆ ಸಹಾಯಕನಾಗಿ ನಿಂತು ಸಮಾಜದ ರಕ್ಷಣೆಯನ್ನು ಮಾಡಿದರು ಎಂದು ಪವಿತ್ರ ಶ್ರಾವಣ ಮಾಸದ ಅಂಗವಾಗಿ ಗವಿಮಠದಲ್ಲಿ ಆಯೋಜಿಸಿದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂದೇಶ ಕುರಿತು ವಿಶೇಷ ಉಪನ್ಯಾಸಮಾಲೆ ಕಾರ್ಯಕ್ರಮದಲ್ಲಿ ಪ್ರೋ. ಸೂರ್ಯಕಾಂತ ಶೀಲವಂತ ಹೇಳಿದರು.
ಗವಿಮಠದ ಪರಿಸರದಲ್ಲಿ ಹೆಚ್ಚಾಗಿ ಕಣಗಿಲು ಎಂದರೆ ಕೆಂಪು ಕಣಗಿಲ ಹೂವಿನ ಗಿಡಗಳು ಇದ್ದದ್ದು ಚಂಗಣಿಗಿಲ ಮಂಟಪವೆಂಬ ಸ್ಥಾನವನ್ನು ರಚಿಸಿ ಗುರು ರುದ್ರಮುನಿ ಅವರು ಏಕಾಂತದಲ್ಲಿದ್ದುಕೊಂಡು ಶಿವ ಧ್ಯಾನ ಮಾಡುತ್ತಿದ್ದರು ಅನೇಕ ಸಾಹಸ ಕಾರ್ಯಗಳು ಮಾಡಿರುವುದನ್ನು ವರ್ಣಿಸಲಾಗದು ಇದರಿಂದ ಅವರು ಇತಿಹಾಸದಲ್ಲಿ ಒಂದು ಮಹತ್ವದ ಸ್ಥಾನ ಪಡೆದಿದ್ದರೆಂದು ಹೇಳಬೇಕಾಗುತ್ತದೆ ಎಂದು ಸಾನಿಧ್ಯ ವಹಿಸಿ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಶ್ರೀ ಲೋಕೇಶ್ ಸ್ವಾಮಿ, ನಿವೃತ್ತ ಶಿಕ್ಷಕರಾದ ಶ್ರೀ ರಾಮಶೆಟ್ಟಿ ಬಿರಾದಾರ, ಸಂಜುಕುಮಾರ ಜಾಧವ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶ್ರೀ ಬಸವಂತಪ್ಪಾ ಲವಾರೆ ಸ್ವಾಗತಿಸಿದರು, ಅಭಿಷೇಕ ರಾಮಣ್ಣನವರ ನಿರೂಪಿಸಿದರು.
ಶ್ರೀಮತಿ ರೇಣುಕಾ ಶಿವಶಂಕರ ರಾಮಣ್ಣನವರ ಪ್ರಾರ್ಥನೆ ಗೀತೆ ಹಾಡಿದರು, ಹಣಮಂತವಾಡಿಯ ಮಹಾಲಕ್ಷ್ಮಿ ಕೋಲಾಟ ಹಾಗೂ ಭಜನಾ ಸಂಘದಿಂದ ಭಜನೆ ನಡೆಯಿತು.
ಭಕ್ತರೆಲ್ಲರಿಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಎ.ಜಿ ಪಾಟೀಲ,ಪ್ರೋ.ರುದ್ರೇಶ್ವರ ಗೋರ್ಟಾ,ರಾಕೇಶ ಪುರವಂತ, ಗೋವಿಂದ ರೆಡ್ಡಿ ಕೋತಂಪಲ್ಲಿ, ಬಾಬುರಾವ ಚಳಕಾಪುರೆ, ಜಯರಾಜ ಕಮ್ಮಾ, ಗೋವಿಂದ ಅಯ್ಯಣ್ಣೋರ್, ಭೀಮರಾಯಿ ಅಯ್ಯಣ್ಣೋರ್, ಪ್ರಭು ಗಾಧಾ, ಶ್ರೀಮತಿ ನರಸಮ್ಮಾ ತಮ್ಮಣಿ, ಶ್ರೀಮತಿ ಸರಸ್ವತಿ ಬೆಂಬಳೆ, ಶ್ರೀಮತಿ ಸವಿತಾ ರಮೇಶ ಸ್ವಾಮಿ, ಶ್ರೀಮತಿ ವಿಮಲಾಬಾಯಿ ಬಿರಾದಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ ಶ್ರೀನಿವಾಸ ಬಿರಾದಾರ




















