ಮೈಸೂರು: ಅಂತರಾಷ್ಟ್ರೀಯ ಪ್ಯಾರಾ ಅಥ್ಲೀಟ್ ನಲ್ಲಿ ಕಂಚಿನ ಪದಕ ಗಳಿಸಿರುವ ಕೆ ಆರ್ ನಗರ ತಾಲೂಕಿನ ಕಂಚುಗಾರ ಕೊಪ್ಪಲಿನ ಕೆ ಎಸ್ ಶಿಲ್ಪಾಅವರು ನಾಮಧಾರಿಗೌಡ ಜನಾಂಗಕ್ಕೆ ಸೇರಿದವರಾಗಿದ್ದು, ಗ್ಲಾಸ್ ಕೊದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ ಶಾಟ್ ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಇವರು ನಾಲ್ಕನೇ ವಯಸ್ಸಿನಲ್ಲಿ ಅಪಘಾತಕ್ಕೆ ಈಡಾಗಿ ತನ್ನ ಒಂದು ಕಾಲನ್ನು ಕಳೆದುಕೊಂಡರು ಧೃತಿಗೆಡದೆ ಸತತ ಪರಿಶ್ರಮದಿಂದ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ.
ಇವರು ರಾಜ್ಯ, ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರೋದು ಶ್ಲಾಘನೀಯವಾಗಿದೆ ಈ ರೀತಿ ನಮ್ಮ ಸಮುದಾಯಕ್ಕೆ ಗೌರವ ತಂದಿರುವ, ಇಡೀ ನಾಡಿನ ಹೆಮ್ಮೆ ಕುವರಿ ಕುಮಾರಿ ಶಿಲ್ಪ ಕೆ.ಎಸ್. ಅವರಿಗೆ ನಮ್ಮ ಸಮಾಜದ ಪರವಾಗಿ ಅಖಿಲ ನಾಮಧಾರಿ ಗೌಡ ಕೇಂದ್ರ ಸಂಘದ ನೇತೃತ್ವ ಮತ್ತು ಎಲ್ಲಾ ವಲಯಗಳ ಸಹಯೋಗದೊಂದಿಗೆ ದಿನಾಂಕ 6/ 9/ 2026 ಭಾನುವಾರ ಬೆಳಿಗ್ಗೆ 10:00 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿ ಆವರಣದಲ್ಲಿರುವ ಕಾವೇರಿ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಸಮಾರಂಭಕ್ಕೆ ಎಲ್ಲರೂ ಪರಿವಾರ ಸಮೇತ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಲಾಗಿದೆ.
- ಕರುನಾಡ ಕಂದ ಸುದ್ದಿ




















