ಆಧುನಿಕ ಯುಗದ ವ್ಯವಹಾರ ಜ್ಞಾನ : ಪುಟಾಣಿ ಮಕ್ಕಳ ಕೈಯಲ್ಲಿ ದೊಡ್ಡ ಕಲಿಕೆ.
ಕೊರಟಗೆರೆ. ಶ್ರೀ ರಾಘವೇಂದ್ರ ಇಂಟರ್ನ್ಯಾಷನಲ್ ಶಾಲೆಯಲ್ಲಿ ಚಿಣ್ಣರ ಸಂತೆ ಆಯೋಜನೆ ಮಾಡಿದ್ದು ಚಿನ್ನರ ಸಂತೆಯು ಪುಟಾಣಿಗಳ ಕೈಯಲ್ಲಿ ಪುಟ್ಟ ವ್ಯಾಪಾರವು ತುಂಬಾ ಅಚ್ಚುಕಟ್ಟಾಗಿ ಸಂತೆಯ ಮೈದಾನವನ್ನು ವ್ಯಾಪಾರದಿಂದ ಕಂಗೊಳಿಸಿತು.
ಶಾಲೆಯ ಮಕ್ಕಳು ಹಣ್ಣು, ತರಕಾರಿ ,ದಿನಸಿ ಸಾಮಾನುಗಳು, ಹೂವು, ಬಿದರಿನ ತಯಾರಿಕಾ ವಸ್ತುಗಳು, ಮರಗೆಣಸು, ಉಪ್ಪಿನಕಾಯಿ ಇನ್ನು ಅನೇಕ ಮಾರಾಟ ಮಾಡುವ ಮೂಲಕ ಮಕ್ಕಳಿಗೆ ವ್ಯವಹಾರ ಮತ್ತು ಹಣದ ಮೌಲ್ಯವನ್ನು ತಿಳಿಸಿಕೊಟ್ಟು ಇಂದು ಆಧುನಿಕ ತಂತ್ರಜ್ಞಾನ ಯುಗದಲ್ಲಿ ಮಕ್ಕಳಿಗೆ ಶಾಲೆಯು ಹೊರ ಜಗತ್ತಿನ ಮಾಹಿತಿಯನ್ನು ತಿಳಿಸಲು ಇಂತಹ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಶಾಲೆಗಳಲ್ಲಿ ನಡೆಸುತ್ತಿದ್ದು ಮಕ್ಕಳಿಗೆ ತುಂಬಾ ಅನುಕೂಲವಾಗಿದೆ. ಮಕ್ಕಳಿಗೆ ಗಣಿತ ವ್ಯವಸಾಯ ಮತ್ತು ರೈತರೊಂದಿಗೆ ಜಗತ್ತಿಗೆ ಇರುವ ಸಂಬಂಧ ಅನುಬಂಧವನ್ನು ಸಂತೆಯ ಮಾದರಿಯಲ್ಲಿ ತಿಳಿಸಿ ಮಕ್ಕಳಿಗೆ ವ್ಯವಹಾರ ಜ್ಞಾನವನ್ನು ಬೆಳೆಸಲು ಚಿಣ್ಣರ ಸಂತೆ ಒಂದು ದೊಡ್ಡ ವೇದಿಕೆಯಾಗಿದೆ.
ಇಂದು ಶಾಲೆಯ ಎಲ್ಲಾ ಶಿಕ್ಷಕರು ವಿದ್ಯಾರ್ಥಿನಿಯರು ಹಾಗೂ ಶಾಲೆಯ ಮುಖ್ಯಸ್ಥರಾದ ಅಜಯ್ , ರುದ್ರೇಶ್, ವ್ಯವಸ್ಥಾಪಕರಾದ ರವಿಕುಮಾರ್ ಹಾಗೂ ಆಡಳಿತ ವರ್ಗದ ಎಲ್ಲಾ ಸಿಬ್ಬಂದಿಗಳು ಮಕ್ಕಳೊಂದಿಗೆ ವ್ಯವಹಾರ ,ವ್ಯಾಪಾರ ,ಸ್ನೇಹ ಸಂಬಂಧಗಳ ಮಾಹಿತಿಯನ್ನು ತಿಳಿಸಿದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















