ಬಣಗಾರ್ ನಾಗಲಿಕ ಸಿಂಪಿ ಸಮಾಜ ಬಾಂಧವರ ನವಿಲೇ ಶ್ರಾವಣ ಕಾರ್ಯಕ್ರಮ..
ಕಂದಗಲ್ಲ :ಇಲ್ಲಿಗೆ ಸಮೀಪದ ನವಿಲೆ ಗ್ರಾಮದಲ್ಲಿ
ಮೂಲ ಶಂಕರಲಿಂಗ ದೇವಸ್ಥಾನ ಹಾಗೂ ಶಂಕರದಾಶಿಮಯ್ಯನವರ ಜನ್ಮಸ್ಥಳ ಕಂದಗಲ್ಲ ಗ್ರಾಮದಿಂದ ಬೆಳಿಗ್ಗೆ ಜ್ಯೋತಿ ಯನ್ನು ನವಿಲೇ ಗ್ರಾಮಕ್ಕೆ ಶಂಕರಲಿಂಗ ದೇವಸ್ಥಾನ ಅಧ್ಯಕ್ಷ ವೀರೇಶ್ ಶಿಂಪಿ ಹಾಗೂ ಇಲಕಲ್ಲ ನಗರದ ಜಗದೀಶ ಸರಾಫ ರವರು ತೆಗೆದುಕೊಂಡು ಬಂದರು ನಂತರ ಬಣಗಾರ ನಾಗಲಿಕ ಸಿಂಪಿ ಸಮಾಜದ ಹುಬ್ಬಳ್ಳಿ, ಧಾರವಾಡ. ಗದಗ್. ಇಲಕಲ್ಲ, ಚಿಕ್ಕೋಡಿ,ಕಂದಗಲ್ಲ ಸೇರಿದಂತೆ ಅನೇಕ ಊರುಗಳ ಸಮಾಜ ಬಾಂಧವರು ಸೇರಿ ನವಿಲೇ ಜಡೆಶಂಕರಲಿಂಗನಿಗೆ ಬೆಳ್ಳಿ ಮೂರ್ತಿ ಅಳವಡಿಸಿ ವಿಶೇಷ ರುದ್ರಾಭಿಷೇಕ ಪೂಜೆ ಸಲ್ಲಿಸಿದರು .
ಮೆರವಣಿಗೆಯಲ್ಲಿ ಜಾಗಟೆ ಸದ್ದು, ಲಿಂಗುವಿನ ಮೂರ್ತಿ. ಜ್ಯೋತಿ.ಬೆಳ್ಳಿ ಮೂರ್ತಿಯೊಂದಿಗೆ ಶಂಕರಲಿಂಗನ ಹಾಗೂ ಶಂಕರದಾಶಿಮಯ್ಯನವರ್ ಜೈಕಾರ ಹಾಕುತ್ತಾಎಲ್ಲ ಭಕ್ತರು ಮೆರವಣಿಗೆಯಲ್ಲಿ ತಮ್ಮ ಭಕ್ತಿಯ ಪರಾಕಷ್ಟೆ ಮೊಡಿಸಿದ್ದು ಕಂಡು ಬಂದಿತು.
2011/12 ನೆ ಸಾಲಿನಿಂದ ನೆಡೆದು ಬಂದ ಶ್ರಾವಣ ಮಾಸದ ಎರಡನೇ ಸೋಮವಾರ ನವಿಲೇ ಶ್ರಾವಣ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಕಾರ್ಯಕ್ರ ಮದಲ್ಲಿ ನವಿಲೇ ಜಡೆ ಶಂಕರಲಿಂಗ ಜಿರ್ನೋದ್ದಾರ ಸಮಿತಿಯ ಅಧ್ಯಕ್ಷ ಹುಬ್ಬಳ್ಳಿಯ ಸುರೇಶ್ ಚನ್ನಿ ಹುಬ್ಬಳ್ಳಿ ಸಮಾಜದ ಅಧ್ಯಕ್ಷ ಅನಿಲ ಕವಿಶಟ್ಟಿ, ಶ್ರೀಶೈಲ ಜೋಡಳ್ಳಿ, ಮಲ್ಲಿಕಾರ್ಜುನ ಶಿರಿಗಣ್ಣನ್ನವರ, ರಾಜಶೇಖರ್ ಬಳ್ಳಾರಿ, ರವಿಶಂಕರ ದಾನಪ್ಪನವರ, ಇಲಕಲ್ಲ ದ ಮಹಾಂತೇಶ್ ಸಮಾಳದ ನಾಗಪ್ಪ ಸಗರದ, ಸಂತೋಷ ಸರಾಫ್, ಬೆನಕಪ್ಪ ಗರಡಿಮನಿ ಸೇರಿದಂತೆ ಸಾವಿರಾರು ಸಂಖ್ಯೆ ಯಲ್ಲಿ ಸಮಾಜ ಬಾಂಧವರು ಮತ್ತು ನವಿಲೇ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















