ಉತ್ತರ ಕನ್ನಡ/ ದಾಂಡೇಲಿ : ಹಳಿಯಾಳ ರೋಡ್ ಮುಖ್ಯ ರಸ್ತೆ ಮೂರನೇ ನಂಬರ್ ಗೇಟ್ ಹತ್ತಿರ ನಡು ರಸ್ತೆಯಲ್ಲಿ ಟ್ರಕ್ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇದ್ದರೂ ಟ್ರಕ್ ಪಾರ್ಕ್ ಮಾಡುತ್ತಿದ್ದಾರೆ. ಇದರಿಂದಾಗಿ ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ, ಹೊರ ರಾಜ್ಯಗಳಿಂದ ಬಂದಂತಹ ಡ್ರೈವರ್ ಗಳು ಅಲ್ಲೇ ಅಡುಗೆ ಮಾಡುವುದು, ಜಳಕ ಮಾಡುವುದು, ಮದ್ಯ ಸೇವನೆ, ಧೂಮಪಾನ ಮಾಡುತ್ತಾ ಹಾಗೆಯೇ ತಮ್ಮ ತಮ್ಮಲ್ಲಿ ಜಗಳವಾಡುವುದು ಸೇರಿದಂತೆ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸಿದ್ದಾರೆ ಸ್ಥಳೀಯ ನಿವಾಸಿಗಳು. ನಗರಸಭೆಯ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಕಠಿಣ ಕ್ರಮ ವಹಿಸಬೇಕಾಗಿ ವಿನಂತಿ ಇಲ್ಲದಿದ್ದಲ್ಲಿ ಈ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತರುವುದು ಅನಿವಾರ್ಯವಾಗುತ್ತದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ವರದಿ ತೇಜಸ್ ರಾವ್




















