ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗದಾಯುದ್ಧ ಕಾವ್ಯ ವರ್ತಮಾನಕ್ಕೆ ಕನ್ನಡಿ :ಪ್ರೊ.ಕರಿಗೂಳಿ ಸುಂಕೇಶ್ವರ

ಗಂಗಾವತಿ : ನಗರದ ಶ್ರೀಕೊಲ್ಲಿ ನಾಗೇಶ್ವರರಾವ್ ಗಂಗಯ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರದಂದು ಕನ್ನಡ ಅಧ್ಯಯನ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ‘ಹಳೆಗನ್ನಡ ಮರು ಓದು’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶ್ರೀ ರಾಮನಗರದ ಚಿಲಕೂರಿ ನಾಗೇಶ್ವರರಾವ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಕರಿಗೂಳಿ ಸುಂಕೇಶ್ವರ ಅವರು ವಿಶೇಷ ಉಪನ್ಯಾಸದಲ್ಲಿ ಮಹಾಕವಿ ರನ್ನ ವಿರಚಿತ ಗದಾಯುದ್ಧ ಕಾವ್ಯದ ದುರ್ಯೋಧನ ವಿಲಾಪ ಕಾವ್ಯಭಾಗವನ್ನು ಎಳೆಎಳೆಯಾಗಿ ಬಿಡಿಸಿಟ್ಟರು.
ಪ್ರೊ. ಕರಿಗೂಳಿಯವರು ವೃತ್ತಿಯಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾಗಿದ್ದರೂ ಅವರು ರನ್ನನ ಗದಾಯುದ್ಧ ಕಾವ್ಯದ ಪದ್ಯಗಳನ್ನು ಅಸ್ಖಲಿತವಾಗಿ, ಬಹಳ ನಿರರ್ಗಳವಾಗಿ ಮತ್ತು ಅದ್ಭುತವಾಗಿ ಹೇಳಿದ್ದು ವಿದ್ಯಾರ್ಥಿಗಳು ಮನಸೂರೆಗೊಂಡರು.
“ಗದಾಯುದ್ದ ಕಾವ್ಯಭಾಗದ ದುರ್ಯೋಧನ ವಿಲಾಪ ಒಂದು ವಿಶಿಷ್ಟ ಭಾಗ. ದುರ್ಯೋಧನ ವ್ಯಕ್ತಿತ್ವದಲ್ಲಿನ ಗುಣಾತ್ಮಕ ವಿಚಾರಗಳನ್ನು ರನ್ನ ರೋಚಕವಾಗಿ ಚಿತ್ರಿಸುತ್ತಾನೆ.
ಶತೃವಿನ ಸದ್ಗುಣಗಳನ್ನು ಗುರುತಿಸುವುದು ರನ್ನನ ಕಾವ್ಯದ ವಿಶೇಷತೆ. ಯುದ್ಧ ಭೂಮಿಯ ಚಿತ್ರಣವನ್ನು ಕಣ್ಮುಂದೆ ಬರುವಂತೆ ರನ್ನ ಚಿತ್ರಿಸಿದ್ದಾನೆ. ಕವಿಯ ದೃಷ್ಟಿ-ಸೃಷ್ಟಿಯ ವಿರಾಟ್ ರೂಪವನ್ನು ನೋಡಬೇಕೆಂದರೆ ರನ್ನನ ಗದಾಯುದ್ಧವನ್ನು ಓದಬೇಕು. ಒಬ್ಬ ವ್ಯಕ್ತಿ ಅಸಹಾಯಕ ಸ್ಥಿತಿಯನ್ನು ತಲುಪಿದಾಗ ಆತನಿಂದ ಹೊಮ್ಮುವ ಭಾವನೆಗಳನ್ನು ಹೃದಯಸ್ಪರ್ಶಿಯಾಗಿ ಕಟ್ಟಿಕೊಟ್ಟಿದ್ದಾನೆ. ಅಳುವವರನ್ನು ಕಂಡು ಅಳುವುದು ಮನುಷ್ಯತ್ವ. ಅಳುವವರನ್ನು ಕಂಡು ನಗುವುದು ಮೃಗತ್ವ. ಇಡೀ ಕಾವ್ಯದ ಮಹತ್ವ ತೆರೆದುಕೊಳ್ಳುವುದು ಕರ್ಣ ಮತ್ತು ದುರ್ಯೋಧನರ ಸಂವಾದದಲ್ಲಿ ನಿಜವಾದ ಗೆಳೆತನ, ಸ್ನೇಹದ ಅರ್ಥವನ್ನು ರನ್ನ ಸೊಗಸಾಗಿ ವಿವರಿಸಿದ್ದಾನೆ. ಹಳಗನ್ನಡ ಕಾವ್ಯದ ಓದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಂದಿನ ಯುವಕರು ಹಳೆಗನ್ನಡವನ್ನು ಓದಿದರೆ ವ್ಯಕ್ತಿತ್ವದ ಒಳ ಲೋಕ ಪರಿಚಯವಾಗುತ್ತದೆ. ಹಳೆಗನ್ನಡವು ನಮಗೆ ಶಾಂತಿ ಮತ್ತು ಪ್ರೀತಿ ಕಲಿಸುತ್ತದೆ. ಮಹಾಭಾರತ ಪಂಚಮ ವೇದ ಎಂದು ಸುಪ್ರಸಿದ್ಧ ವಾಗಿರುವ ಜಗತ್ತಿನ ಶ್ರೇಷ್ಟ ಕಾವ್ಯ. ಹಳಗನ್ನಡ ಕಾವ್ಯ ಪರಂಪರೆಯಲ್ಲಿ ಪಂಪ,ರನ್ನ,ಪೊನ್ನ ರಂತಹ ಮಹಾಕವಿಗಳು ಮಹಾಭಾರತವನ್ನು ರಸವತ್ತಾಗಿ ಕಟ್ಟಿ ಕೊಟ್ಟಿದ್ದಾರೆ ” ಎಂದು ಮನಮುಟ್ಟುವಂತೆ ಡಾ. ಕರಿಗೂಳಿಯವರು ವಿವರಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಸಸಿಗೆ ನೀರೆರೆಯುವದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ
ದುರ್ಯೋಧನನಿಗೆ ಒಳ್ಳೆಯ ದೈವ ಶಕ್ತಿ ಇತ್ತು. ರನ್ನ, ಪೊನ್ನ, ಜನ್ನ ಇವರು ಕನ್ನಡ ಸಾಹಿತ್ಯವನ್ನು ಶ್ರೀ ಮಂತಗೊಳಿಸಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಮುಮ್ತಾಜ್ ಬೇಗಂ ಮಾತನಾಡಿ” ರನ್ನನ ಗದಾಯುದ್ಧ ಮಹತ್ವದ ಕಾವ್ಯ. ಹಳಗನ್ನಡ ಕಾವ್ಯ ದ ಓದು ನಮ್ಮ ಜ್ಞಾನದ ವೈಶಾಲ್ಯತೆಯನ್ನು ತಿಳಿಸುತ್ತದೆ. ಹಳಗನ್ನಡ ಕಾವ್ಯಗಳ ಮಾನವೀಯ ಸಂವೇದನೆಗಳನ್ನು ಇಂದಿನ ತಲೆಮಾರಿಗೆ ತಲುಪಿಸುವ ಉದ್ದೇಶ ಹಳಗನ್ನಡ ಮರು ಓದು ಕಾರ್ಯಕ್ರಮದ್ದು. ಹಳಗನ್ನಡ ಕಾವ್ಯದ ಸೊಗಸನ್ನು ಸವಿಯಬೇಕು” ಎಂದರು.
ಐಕ್ಯೂಎಸಿ ಸಂಚಾಲಕ ಉಮಾಕಾಂತ ಅವರೆಡ್ಡಿ, ಗುಂಡೂರು ಪವನ್ ಕುಮಾರ ಮಾತನಾಡಿದರು.
ಕಾರ್ಯಕ್ರಮವನ್ನು ಡಾ.ಜೆ.ಎಂ.ಶಿಲ್ಪಾ ನಿರೂಪಿಸಿದರು. ಡಾ.ಅನ್ನಪೂರ್ಣ ಗುಡದೂರು ಸ್ವಾಗತಿಸಿದರು.
ಪ್ರಾಸ್ತಾವಿಕವಾಗಿ ರವಿ ಹಾದಿಮನಿ ಮಾತನಾಡಿದರು. ಸ್ವಾತಿ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ನರಸಿಂಹ, ಡಾ.ಬಸವರಾಜ ಗಡಾದ್, ಡಾ.ಸೃಷ್ಟಿ, ಇತಿಹಾಸ ವಿಭಾಗದ ಡಾ.ಮಣಿಕಂಠ ಹಂಗಳ, ಕನ್ನಡ ವಿಭಾಗದ ಡಾ.ಬಸವರಾಜ ಗೌಡನಬಾವಿ, ಡಾ.ಪಾಗುಂಡಪ್ಪ, ಡಾ.ಉಷಾರಾಣಿ, ಬಾಲಪ್ಪ ಬಡಿಗೇರ್, ಡಾ.ಲಕ್ಷ್ಮೀ ಬಾಯಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!