ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಗವಿಮಠದಲ್ಲಿ 28-09-2026ರಂದು ನಡೆಯುವ ಪರಮಪೂಜ್ಯರಾದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ಜನ್ಮದಿನೋತ್ಸವ ಹಾಗೂ ಪಟ್ಟಾಧಿಕಾರ ವರ್ಧಂತಿ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 27.09.2026 ರವಿವಾರ ಬೆಳಗ್ಗೆ 11:00 ಗಂಟೆಗೆ ಬಸವಕಲ್ಯಾಣ ನಗರದ ಮಹಾತ್ಮ ಗಾಂಧಿ ವೃತ್ತದಿಂದ ಶಿವಾಜಿ ಪಾರ್ಕ್ ವರೆಗೆ ಕ್ಯಾನ್ಸರ್ ಮುಕ್ತ ಜೀವನ ಜನಜಾಗೃತಿ ಪಾದಯಾತ್ರೆ ಮಾಡುವ ಸಲುವಾಗಿ ಪರಮ ಪೂಜ್ಯರು ಪಾದಯಾತ್ರೆಯನ್ನು ಕೈಗೊಂಡರು.
ಯುವ ಸಾವಯವ ಕೃಷಿ ಸಾಧಕರಾದ ಸ್ವದೇಶಿ ಪ್ರಭು ಅವರಿಂದ ಉದ್ಘಾಟಿಸಿ ಮಾತನಾಡಿದರು.
ಪೂಜಶ್ರೀ ಷಟ್ ಸ್ಥಲ ಬ್ರಹ್ಮ ಡಾ. ಅಭಿನವ ಘನಲಿಂಗ ರುದ್ರಮನಿ ಶಿವಾಚಾರ್ಯರು ಕ್ಯಾನ್ಸರ್ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಕುರಿತು ಮಾಹಿತಿ ನೀಡಿದರು.
ಮಕ್ಕಳ ವೈದ್ಯರಾದ ಡಾ. ಜಿ.ಎಸ್ ಭೂರಾಳೆ ಅವರು ಆಹಾರ ,ಆರೋಗ್ಯದ ಕುರಿತು ವಿಷಯ ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಗುರುರಾಜ ಕುಲಕರ್ಣಿ ಅವರು ಕ್ಯಾನ್ಸರ್ ಬಗ್ಗೆ ಮಾಹಿತಿ ತಿಳಿಸಿದರು.
ಸಿಪಿಐ ಅಲಿಸಾಬ್ ಅವರು ದುಶ್ಚಟಗಳನ್ನು ದೂರವಿಡಿ ಎಂಬ ಘೋಷಣೆ ಕೂಗಿ ಪಾದಯಾತ್ರೆ ಉದ್ದಕ್ಕೂ ಪಾಲ್ಗೊಂಡಿದ್ದರು.
ಶಿವಕುಮಾರ್ ಬಿರಾದಾರ ಮಾತನಾಡಿ ಮುಂದಿನ ವರ್ಷ ಪರಮಪೂಜ್ಯರ ಹುಟ್ಟುಹಬ್ಬವನ್ನು ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗುಂಡುರೆಡ್ಡಿ ಕಮಲಾಪುರೆ ಅವರು ಪೂಜ್ಯರಿಗೆ ಸತ್ಕರಿಸಿದರು.
ಈ ಪಾದಯಾತ್ರೆಯಲ್ಲಿ ರವಿಚಂದನಕೆರೆ, ರವಿ ನಾವದ್ಗೆಕರ್, ಶರಣಪ್ಪ ಬಿರಾದಾರ,ಬಸವಂತಪ್ಪ ಲವಾರೆ, ಪ್ರೊಫೆಸರ್ ರುದ್ರೇಶ್ವರ ಗೋರ್ಟಾ,
ಮಲ್ಲಿಕಾರ್ಜುನ ಅಲಗುಡೆ, ಶ್ರೀನಿವಾಸ ಬಿರಾದಾರ ಸೇರಿದಂತೆ ಸಮಾಜದ ಬಾಂಧವರು ಮತ್ತು ಶ್ರೀ ಮಠದ ಭಕ್ತರು ಹಾಗೂ ನಾಗರಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ನೀಲಗಂಗಾ ಶಿಕ್ಷಣ ಸಂಸ್ಥೆ, ವಿದ್ಯಾ ಮಂದಿರ ಶಾಲೆ ಮುಡಬಿ, ಹಾಗೂ ಎಲ್ಲ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಸಂಕಲ್ಪ ಕಾಲೇಜಿನ ವಿದ್ಯಾರ್ಥಿಗಳು ಈ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಕೊನೆಗೆ ಪ್ರಸಾದವನ್ನು ಸ್ವೀಕರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ನಾಗರಿಕರಿಗೆ ಮತ್ತು ಸಿಬ್ಬಂದಿಗಳಿಗೆ ಪೂಜ್ಯರ ಮಠದಿಂದ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.
ವರದಿ : ಶ್ರೀನಿವಾಸ ಬಿರಾದಾರ




















