
ಮೈಸೂರು: ಕರ್ನಾಟಕದಲ್ಲಿ ಅನೇಕ ಜಲಾಶಯಗಳಿವೆ ಆದರೆ ಮೈಸೂರಿನ ಕೃಷ್ಣರಾಜ ಸಾಗರದ ಜಲಾಶಯದಲ್ಲಿ ಪ್ರಕೃತಿ ಸೌಂದರ್ಯ ಆಸ್ವಾದಿಸುವ ಅವಕಾಶ ಒಂದು ಅಪೂರ್ವ ಅನುಭವ ಎನ್ನಬಹುದು.
ಬಣ್ಣ ಬಣ್ಣದ ಚಿತ್ತಾರಗಳನ್ನು ಮೂಡಿಸುವ ನೀರಿನ ಕಾರಂಜಿ, ಬಣ್ಣ ಬಣ್ಣದ ಹೂವಿನ ಗಿಡಗಳು ಮತ್ತೂ ವಿಶೇಷವಾಗಿ ಸಂಗೀತ ಕಾರಂಜಿ ಪ್ರೇಕ್ಷಕರನ್ನು ಸಮಯ ಕಳೆಯಲಷ್ಟೇ ಅಲ್ಲದೆ ಮಂತ್ರ ಮುಗ್ದಗೊಳಿಸುವ ಜಾಣತನ ಹೊಂದಿದೆ.
ಮಳೆ ಅಭಾವ ಮತ್ತು ದಸರಾ ರಿಪೇರಿ ಕೆಲಸ ನಡೆಯುತ್ತಿರುವುದರಿಂದ ಬೋಟ್ ನಲ್ಲಿ ಸಾಗಿ ಮನರಂಜನೆ ಪಡೆಯಲು ಈಗ ಸಾಧ್ಯ ಆಗುತ್ತಿಲ್ಲ ಎಂದಷ್ಟೇ ಇಂದಿನ ಹೊಸ ಸಮಸ್ಯೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು




















