ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

೨೨೦/೧೧೦ ಕೆವಿ ವಿದ್ಯುತ್ ಕೇಂದ್ರಕ್ಕೆ ಶಿಲಾನ್ಯಾಸವಿದ್ಯುತ್ ತೊಂದರೆ ನೀಗಿಸುವುದು ಮೊದಲ ಆದ್ಯತೆ :ಕಾಶಪ್ಪನವರ

ಹುನಗುಂದ: ಸತತ ಒಂದು ದಶಕದ ಪ್ರಯತ್ನದ ಫಲ ಈ ೨೨೦ ಕೆವಿ ವಿದ್ಯುತ್ ಸ್ವೀಕರಣ ಕೇಂದ್ರ. ಇದರಿಂದ ಈ ಭಾಗದ ಕೃಷಿ, ನೀರಾವರಿ, ಕೈಗಾರಿಕೆ, ನೇಕಾರಿಕೆ ಮತ್ತು ಸಾರ್ವಜನಿಕ ವಲಯಕ್ಕೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸಚಿವ ಹಾಗೂ ಬಾಗಲಕೋಟೆ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.
ಅವರು ತಾಲೂಕಿನ ಅಮರಾವತಿ ಹತ್ತಿರ ಈಚೆಗೆ ರೂ. ೧೪೭ ಕೋಟಿ ವೆಚ್ಚದಲ್ಲಿ ನಿರ್ಮಿಸುವ ೨೨೦/೧೧೦ ಕೆವಿ ವಿದ್ಯುತ್ ಸ್ವೀಕರಣ ಕೇಂದ್ರದ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿ ಮಾತನಾಡಿದರು.
ಶೀಘ್ರದಲ್ಲೇ ಕುಣಬೆಂಚಿ, ಮರೋಳ ಮತ್ತು ಚಿಕ್ಕಮಾಗಿ ೧೧೦ ಕೆವಿ ವಿದ್ಯುತ್ ವಿತರಣಾ ಕೇಂದ್ರಗಳಿಗೂ ಶಿಲಾನ್ಯಾಸ ಮಾಡಲಾಗುವುದು. ಬಹುದಿನದ ಹುನಗುಂದ ಕೆಪಿಟಿಸಿಎಲ್ ವಿಭಾಗ ಕಚೇರಿ ಮಂಜೂರಿ ತಂದು ಉದ್ಘಾಟಿಸಲಾಗುವುದು. ಹೆಚ್ಚು ಹೆಚ್ಚು ವಿದ್ಯುತ್ ವಲಯದ ಆದ್ಯತೆಯಿಂದ ಈ ಭಾಗದ ಸಮಗ್ರ ಅಭಿವೃದ್ಧಿಗೆ ಅನುಕೂಲ ಆಗಲಿದೆ. ಈ ಯೋಜನೆಯ ಕಾಮಗಾರಿ ಸಂದರ್ಭದಲ್ಲಿ ರೈತರ ಸಹಕಾರ ಅಗತ್ಯ ಎಂದರು.
ನಾಗರಿಕ ಸೇವಾ ಸುಧಾರಣಾ ಸಮಿತಿ ಗೌರವಾಧ್ಯಕ್ಷ ಮಹಾಂತಯ್ಯ ಗಚ್ಚಿನಮಠ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅನೀಲಕುಮಾರ ದಡ್ಡಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುತ್ತಣ್ಣ ಕಲಗೋಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಓ ಗಜಾನನ ಬಾಲೆ, ಎಸ್ ಪಿ ಸಿದ್ದಾರ್ಥ ಗೋಯಲ್, ಮುಖಂಡರಾದ ಶರಣಪ್ಪ ಆಮದಿಹಾಳ, ಡಾ.ಅರುಣಾ ಅಕ್ಕಿ, ಲಾಲಸಾಬ ಶಿವನಗುತ್ತಿ, ಅಮೀನಪ್ಪ ಸಂದಿಗವಾಡ, ಶಿವಾನಂದ ಮುಚಖಂಡಿ, ಮಹಾಂತೇಶ ಅವಾರಿ, ಜೈನಸಾಬ ಹಗೇದಾಳ, ಬಸವರಾಜ ಗೌಡರ, ಭೀಮರಾಯ ಬಿರಾದಾರ, ಜಬ್ಬಾರ್ ಕಲಬುರ್ಗಿ, ಬಸವರಾಜ ಭಜಂತ್ರಿ, ಮಹಾಂತಗೌಡ ಪಾಟೀಲ, ಮಹಾಂತೇಶ ನರಗುಂದ, ರಾಘವೇಂದ್ರ ಚಿಂಚಮಿ ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಧೀಕ್ಷಕ ಎಂಜಿನಿಯರ್ ರಮೇಶ ಪವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಶಾಂತ ಮಡ್ಡೆಣ್ಣವರ ಸ್ವಾಗತಿಸಿದರು.
ಶರಣು ಚಿತ್ತವಾಡಗಿ ನಿರೂಪಿಸಿ ವಂದಿಸಿದರು. ಅಮರಾವತಿ ಪಿಎಂಶ್ರೀ ಕೆಪಿಎಸ್ ಶಾಲೆ ಮಕ್ಕಳು ಪ್ರಾರ್ಥಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!