ಬಾಗಲಕೋಟೆ: ವಿಮೆ ಹಾಗೂ ಹಣಕಾಸು ಕ್ಷೇತ್ರದ ವೃತ್ತಿಪರರಿಗೆ ಉಪಯುಕ್ತವಾಗುವಂತೆ “ರಂಜನ್ ನಾಗರಕಟ್ಟೆ ಅವರ ಆನ್‌ಲೈನ್ ವಿಶೇಷ ಶೈಕ್ಷಣಿಕ ಸೆಮಿನಾರ್” ಸೆಪ್ಟೆಂಬರ್ 29ರಂದು ಜೂಮ್ ಮೂಲಕ ನಡೆಯಲಿದೆ.
ಭಾರತದ ಪ್ರಮುಖ ಕಾನ್ಸೆಪ್ಟ್ ಟ್ರೈನರ್ ಹಾಗೂ ಫೈನಾನ್ಷಿಯಲ್ ಕೋಚ್ ಶ್ರೀ ರಂಜನ್ ನಾಗರಕಟ್ಟೆ ಅವರು ಸೆಮಿನಾರ್‌ನಲ್ಲಿ ವಿವಿಧ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಿದ್ದಾರೆ. ಜೀವನ್ ಉತ್ಸವದ 3 ಪ್ರಮುಖ ವೈಶಿಷ್ಟ್ಯಗಳು, ಬಿಮಾ ಪ್ಲಾಟಿನಂನ 3 ಪ್ರಮುಖ ಅಂಶಗಳು, ಸ್ಮಾರ್ಟ್ ಪೆನ್ಷನ್ ಪ್ಲಾನ್‌ನ 3 ವಿಶೇಷತೆಗಳು, “Subject to Market Risks” ಎಂಬ ಪರಿಕಲ್ಪನೆಯ ಅರಿವು ಹಾಗೂ LIC ಲೈಫ್ ಫಂಡ್‌ನ ಕಳೆದ 25 ವರ್ಷಗಳ ಕಾರ್ಯಕ್ಷಮತೆ ಕುರಿತು ಮಾಹಿತಿ ಮತ್ತು ಪ್ರಾಯೋಗಿಕ ಒಳನೋಟಗಳನ್ನು ನೀಡಲಾಗುತ್ತದೆ.
ಗ್ರಾಹಕರಿಗೆ ವಿಮಾ ಹಾಗೂ ಹಣಕಾಸು ಯೋಜನೆಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸುವುದು, ಪ್ರಮುಖ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ವಿವರಿಸುವುದು ಮತ್ತು ಮಾರಾಟ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಅಗತ್ಯವಾದ ಪ್ರಾಯೋಗಿಕ ಮಾಹಿತಿಯನ್ನು ಸೆಮಿನಾರ್‌ನಲ್ಲಿ ಹಂಚಿಕೊಳ್ಳಲಾಗುತ್ತದೆ.
ಹಿಂದಿ ಭಾಷೆಯ ಅಧಿವೇಶನ ಸೆ.29ರಂದು ಬೆಳಗ್ಗೆ 9ರಿಂದ 10.30ರವರೆಗೆ, ಇಂಗ್ಲಿಷ್ ಅಧಿವೇಶನ ಸಂಜೆ 6ರಿಂದ 7.30ರವರೆಗೆ ನಡೆಯಲಿದೆ. ಜೂಮ್ ಮೂಲಕ ನಡೆಯುವ ಈ ಆನ್‌ಲೈನ್ ಸೆಮಿನಾರ್‌ಗೆ ₹299 ನೋಂದಣಿ ಶುಲ್ಕ ನಿಗದಿಪಡಿಸಲಾಗಿದೆ.
ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ ಸುಮಂದಾ – 8197527689 ಅವರನ್ನು ಸಂಪರ್ಕಿಸಬಹುದು.




















