ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವೃತ್ತಿ ರಂಗಭೂಮಿಯ ಅದ್ಭುತ ನಾಟಕ” ಸುಪಾರಿ ಸರೋಜಾ “

ಬರೋಬ್ಬರಿ ಮೂರು ತಾಸುಗಳ ಕಾಲ ತನ್ನದೇ ಆದ ಭಾವಲೋಕದಲ್ಲಿ ಎಳೆದೊಯ್ಯುತ್ತಾ ರಂಗಭೂಮಿಯ ತಾಕತ್ತು ಎಂತದ್ದು ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿಸಿದ ನಾಟಕ ” ಸುಪಾರಿ ಸರೋಜಾ” ಗಾನಯೋಗಿ ಪಂಚಾಕ್ಷರಿ ನಾಟ್ಯ ಸಂಘದಿಂದ ಮೂಡಿ ಬರುತ್ತಿರುವ ಈ ನಾಟಕ ಇಂದು ನಿಜಕ್ಕೂ ನನ್ನ ಮೈಮನಗಳನ್ನ ರೋಮಾಂಚನಗೊಳಿಸಿತು ಎಂದರೆ ಅತಿಶಯೋಕ್ತಿಯಾಗಲಾರದು.

ಕಮತಗಿಯ ಪಟ್ಟಣದಲ್ಲಿ ಗಾನಯೋಗಿ ಪಂಚಾಕ್ಷರಿ ನಾಟ್ಯ ಸಂಘದಿಂದ ಮೂಡಿ ಬರುತ್ತಿರುವ ಈ ನಾಟಕದ ಪ್ರತಿಯೊಂದು ಪಾತ್ರಗಳ ಅಭಿನಯ ಕಣ್ಣು ಕಟ್ಟುವಂಥಹ ಭಾವಾಭಿವ್ಯಕ್ತಿ , ಅದ್ಭುತ ಕಥಾ ವಸ್ತು, ಮನಸೂರೆಗೊಳಿಸುವ ಹಾಸ್ಯ, ಒಂದೊಂದು ಸನ್ನಿವೇಶಗಳೂ ಹೇಳಿ ಮಾಡಿಸಿದಂತಿವೆ. ( ಕೊನೆಯ ಸನ್ನಿವೇಶವೊಂದನ್ನ ಬಿಟ್ಟು).

ಒಂದೊಳ್ಳೆ ಕಥಾವಸ್ತು, ಪಾತ್ರಗಳಿಗೆ ಜೀವ ತುಂಬಿ ಪರಕಾಯ ಪ್ರವೇಶ ಮಾಡಿಸುವಂಥ ಸರೋಜಾಳ ಪಾತ್ರ ಹಾಗೂ ಅವಳ ಅಕ್ಕನ ಪಾತ್ರ ಹಾಸ್ಯ ಕಲಾವಿದನ ಅಮೋಘ ಅಭಿನಯ ಒಂದೊಂದು ಪಾತ್ರಗಳೂ ಜೀವಂತ.

ಈ ಸಂಘದ ಇನ್ನೊಂದು ವಿಶೇಷವೆಂದರೆ ಇಲ್ಲಿರುವ ಯಾವ ಹೆಣ್ಣು ಪಾತ್ರವೂ ನಿಜವಾದ ಹೆಣ್ಣಲ್ಲ ಪುರುಷ ಕಲಾವಿದರೆ ಇಲ್ಲಿ ಹೆಣ್ಣು ಪಾತ್ರಧಾರಿಗಳು ಆದರೆ ಇವರ ಅಭಿನಯ ಮಾತ್ರ ಅನಾಹುತ.

ಮಚ್ಚು,ಗುಂಡು, ಹೊಡೆದಾಟಗಳು, ಲವಸ್ಟೋರಿಗಳಂಥ ಕಥಾ ಸನ್ನಿವೇಶಗಳನ್ನುಳ್ಳ ಸಿನಿಮಾಗಳೇ ಹಿಟ್ ಆಗುತ್ತವೆ ಎಂಬ ಕಲ್ಪನೆಯಲ್ಲಿ ಸಾಗುತ್ತಿರುವ ಸಿನಿಮಾರಂಗಕ್ಕೆ ಇಂದು ಇಂಥಹ ಹಲವಾರು ವೃತ್ತಿ ರಂಗಭೂಮಿ ಪ್ರಯೋಗಗಳು ಸಿನಿಮಾ ರಂಗಕ್ಕೆ ಸವಾಲನ್ನೊಡ್ಡುತ್ತಿವೆ. ಜನರಿಗೆ ಬೇಕಾದ ಮನರಂಜನೆಯನ್ನು ತುಂಬಾ ಅದ್ಭುತವಾಗಿ ಕಟ್ಟಿಕೊಡುತ್ತಿವೆ.

ಮೂರು ತಾಸುಗಳ ಕಾಲ ನಮ್ಮ ಕುಟುಂಬಗಳ ಜೊತೆಗೆ ಕುಳಿತು ನೋಡಬಹುದಾದ ಒಂದು ಉತ್ತಮ ನಾಟಕ . ಇತ್ತಿಚೆಗೆ ವೃತ್ತಿ ರಂಗಭೂಮಿ ಉತ್ತಮ ಪ್ರಯೋಗಗಳ ಮೂಲಕ ತನ್ನ ಕಳೆದುಹೋದ ಪಾರಮ್ಯವನ್ನು ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂಬುದು ಈ ನಾಟಕದಿಂದ ಕಂಡುಕೊಳ್ಳಬಹುದಾಗಿದ್ದು. ಇನ್ನು ಕೆಲವು ನಾಟಕ ಕಂಪನಿಗಳು ಇಂತಹ ಅತ್ಯುತ್ತಮ ಪ್ರಯೋಗಶೀಲತೆಯನ್ನು ರೂಢಿಸಿಕೊಂಡರೆ ನಿಜವಾಗಿಯೂ ರಂಗಭೂಮಿ ಮತ್ತೆ ತನ್ನ ವೈಭವಕ್ಕೆ ಮರಳಬಹುದು.

ಈ ನಾಟಕದ ಕೊನೆಯ ಸನ್ನಿವೇಶ ಮಾತ್ರ ನನಗೆ ಇಷ್ಟವಾಗಲಿಲ್ಲ ಆದರೆ ಉಳಿದಂತೆ ಅಬ್ಬಾ ನಿಜಕ್ಕೂ ದೃಶ್ಯಕಾವ್ಯ. ಕೊನೆಯಲ್ಲಿ ಬರುವ ಸರೋಜಾಳ ಮಗುವಿನ ತ್ಯಾಗದ ಸನ್ನಿವೇಶವಂತು ಎಂಥವನ ಮನದೊಳಗೂ ಕಲಾವಿದರ ಕಲೆಯ ಬಗ್ಗೆ ಎದ್ದುನಿಂತು ಚಪ್ಪಾಳೆ ತಟ್ಟುವಂತೆ ಮಾಡುವಂಥದ್ದು.

ಒಟ್ಟಲ್ಲಿ ಬಹಳ ದಿನಗಳ ನಂತರ ಒಂದೊಳ್ಳೆ ನಾಟಕ ನೋಡಿದೆ. ಅದು ನಮ್ಮ ರಂಗಭೂಮಿಯ ಬಗ್ಗೆ ಅಪಾರ ಕಾಳಜಿ ಮನುಷ್ಯ ಶ್ರೀ ಹರಿಯೊಂದಿಗೆ ಹಾಗೂ ಸ್ನೇಹಿತರಾದ ಅಶೋಕ ಬಳ್ಳಾ ಸರ್ ಅವರೊಂದಿಗೆ.

ಆ ಹಾಸ್ಯ ಕಲಾವಿದನೊಂದಿಗೆ ಒಂದು ಸೆಲ್ಫಿ ತೊಗೊಂಡು ಅವರಿಗೆ ನಾವೆಲ್ಲ ಸೇರಿ ವಿಷ್ ಮಾಡಿಬಂದ್ವಿ.

  • ಶ್ರೇಯಾಂಶ ಕೋಲ್ಹಾರ, ಶಿಕ್ಷಕರು
    ಕಮತಗಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!