ಬೆಂಗಳೂರು: ಚಾಮರಾಜ ಪೇಟೆಯ ಮಾತಿನ ಮನೆಯ 137ನೆಯ ಕಾರ್ಯಕ್ರಮವಾಗಿ ಡಾ. ಎಚ್ ಎನ್ ಮೀರಾ ಅಭಿನಯದ ಪಂಚವರ್ಣೆ ನಾಟಕವು ಪ್ರದರ್ಶಿತವಾಯಿತು.
ವಿಶೇಷವೆಂದರೆ ಇದು ಏಕ ವ್ಯಕ್ತಿ ರಂಗ ಪ್ರಯೋಗವಾಗಿದ್ದು, ಮಹಾಭಾರತದ ದ್ರೌಪದಿಯ ಮನದ ತುಮುಲವನ್ನು ಮೀರಾ ಅವರು ಉತ್ಕೃಷ್ಠ ಅಭಿನಯದಲ್ಲಿ ಸುಮಾರು ಒಂದೂ ಕಾಲು ಗಂಟೆ ನೆರೆದಿದ್ದ ರಂಗಾಸಕ್ತರನ್ನು ಹಾಗೂ ಜಾಲತಾಣದ ವೀಕ್ಷಕರನ್ನು ಮೋಡಿ ಮಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಡಾ.ಮೀರಾ ಅವರಿಗೆ ಮಾತಿನ ಮನೆಯ ಪರವಾಗಿ ರಾ. ಸು. ವೆಂಕಟೇಶ ಗೌರವಿಸಿ, ಅಭಿನಂದಿಸಿದರು.
ಕಾರ್ಯಕ್ರಮವನ್ನು ನಾಡಗೀತೆಯೊಂದಿಗೆ ಆರಂಭಿಸಲಾಯಿತು.
ಶ್ರೀಮತಿ ರಾಧಾ ಕೇಶವ ಹೆಬ್ಬಾರ್ ಅವರ ನಿರೂಪಣೆಯಿತ್ತು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಮೈಸೂರು




















