ಮನುಷ್ಯ ಸೃಷ್ಟಿಸೊ ಪಾತ್ರದಲ್ಲಿ ಸುಳ್ಳು ಅವಮಾನ ನೀಚತನವಿರುತ್ತದೆ,
ದೇವರು ಸೃಷ್ಟಿಸೊ ಪಾತ್ರದಲ್ಲಿ ನಂಬಿಕೆ ಭಕ್ತಿ ಆತ್ಮಸ್ಥೈರ್ಯವಿರುತ್ತದೆ.
ಆವೇಶ ಮಾಡಬೇಡಿ, ಆಲೋಚನೆ ಮಾಡಿ
ಸುಳ್ಳು ನಗುತ್ತಿರುವಾಗ ಸತ್ಯ ಮರೆಮಾಚಿರುತ್ತದೆ,
ಒಂದು ಸಲ ಸತ್ಯ ನಕ್ಕರೆ ಸುಳ್ಳಿನ ಸುಳಿವೇ ಇರಲ್ಲ.
ಪರವಾಗಿದ್ದ ದಿನದಲ್ಲಿ ಅಹಂಕಾರ ಬೇಡ, ವಿರುದ್ಧವಾಗಿದ್ದ ದಿನದಲ್ಲಿ ತಾಳ್ಮೆ ಕಳೆದುಕೊಳ್ಳಬೇಡ.
ಇಲ್ಲಿ ಯಾವುದು ಶಾಶ್ವತವಲ್ಲ ನೀನು ನಾನು ಈ ಜಗತ್ತೆ ಶಾಶ್ವತವಲ್ಲ.
- ಎಸ್ ಎಲ್ ಈಶಪ್ಪ, ಮುಸಲಾಪುರ.




















