ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹುತಾತ್ಮ ವೀರ ಯೋಧ ಶ್ರೀ ಸಿದ್ದಪ್ಪ .ಸo. ಮಾದರ ರವರ ಮೂರ್ತಿ ಅನಾವರಣ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಳಗಾನೂರಿನಲ್ಲಿ ಹುತಾತ್ಮ ವೀರ ಯೋಧ ಶ್ರೀ ಸಿದ್ದಪ್ಪ .ಸo. ಮಾದರ ರವರ ಮೂರ್ತಿ ಅನಾವರಣವನ್ನು ದಿನಾಂಕ 29- 09-2026 ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು.

ಈ ವೇದಿಕೆಯ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಜಯಸಿದ್ದೇಶ್ವರ ಸ್ವಾಮೀಜಿಗಳು ಅನ್ನದಾನೇಶ್ವರ ಸಂಸ್ಥಾನ ಹಿರೇಮಠ ಹಿರೂರ ವಹಿಸಿದ್ದರು.
ಅಧ್ಯಕ್ಷತೆಯನ್ನು ಶ್ರೀಮಾನ್ಯ ಮಾಜಿ ಶಾಸಕರುಗಳಾದ ಎ.ಎಸ್.ಪಾಟೀಲ್ ನಡಹಳ್ಳಿ ಅವರು,
ಮುಖ್ಯ ಅತಿಥಿಗಳಾಗಿ ಶ್ರೀಮಾನ್ಯ ಬಸನಗೌಡ ಮಾಡಿಗಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಡಾ. ಶ್ರೀಮಾನ್ಯ ಪ್ರಭುಗೌಡ .ಬ.ಲಿಂಗದಳ್ಳಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳು ಚಬನೂರ, ವಿಜಯಪುರ ಜಿಲ್ಲೆಯ ಮಾಜಿ ಯೋಧರು ಹಾಗೂ ಊರಿನ ಗಣ್ಯ ಮಾನ್ಯರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು, ಸದಸ್ಯರು ಗ್ರಾಮದ ಸ್ವಾಮಿಗಳು ಉಪಸ್ಥಿತರಿದ್ದರು.
ಶ್ರೀಮತಿ ಎಂ.ಬಿ. ನಾಡಗೌಡ ಶಿಕ್ಷಕಿಯರು ಸ್ವಾಗತವನ್ನು ಕೋರಿದರು.
ಪ್ರಾರ್ಥನೆ ಗೀತೆಯೊಂದಿಗೆ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ನಾಡಗೀತೆಯನ್ನು ಹಾಡಲಾಯಿತು.
ದಿವಂಗತ ವೀರ ಯೋಧ ಸಿದ್ದಪ್ಪ ಸಂ. ಮಾದರ ಅವರ ಕಿರು ಪರಿಚಯವನ್ನು ಶಿವಣ್ಣ ಕಡಕೋಳ ಗುರುಗಳು ಮಾಡಿಕೊಟ್ಟರು.
ಜ್ಯೋತಿ ಬೆಳಗಿಸಿದ ನಂತರ ಮೂರ್ತಿ ಅನಾವರಣವನ್ನು ವೇದಿಕೆಯ ಸರ್ವರಿಂದ ನೆರವೇರಿಸಲಾಯಿತು.
ಇವರ ಕುಟುಂಬ ಸದಸ್ಯರುಗಳಾದ ತಾಯಿ ತಂಗಿ ಅವರ ಧರ್ಮಪತ್ನಿ ಅವರಿಗೆ ಹಾಗೂ ಮಾಜಿ ಸೈನಿಕರಿಗೆ ವೇದಿಕೆ ಮೇಲೆ ಸನ್ಮಾನಿಸಲಾಯಿತು.
ಈ ಸಭೆಯನ್ನು ಉದ್ದೇಶಿಸಿ ಅಧ್ಯಕ್ಷತೆ ವಹಿಸಿದ ಶ್ರೀಮಾನ್ಯ ಎ. ಎಸ್. ಪಾಟೀಲ ನಡಹಳ್ಳಿಯವರು ಮಾತನಾಡಿದರು.
ಮುಖ್ಯ ಅತಿಥಿ ಭಾಷಣವನ್ನು ಬಸನಗೌಡ ಮಾಡಿಗಿ ಯವರು , ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ರಂಜಾನ್ ನದಾಫ್ ನಡೆಸಿಕೊಟ್ಟರು.

ಹಿರೂರ ಸ್ವಾಮಿಗಳು ಆಶೀರ್ವಚನವನ್ನು ನೀಡಿದರು.
ಅವರ ಜೀವಿತಾವಧಿ 56 ವರ್ಷಗಳಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ಹುತಾತ್ಮರಾಗಿದ್ದಾರೆ.

ವರದಿಗಾರರು ಸಂಗಮೇಶ. ಸಿ.ಚೌದ್ರಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!